35 ಸಾವಿರ ರೂ. ಬೆಲೆಬಾಳುವ ಲ್ಯಾಪ್​ಟಾಪ್ 60 ಸಾವಿರಕ್ಕೆ ಖರೀದಿ.. ಅವ್ಯವಹಾರಕ್ಕೆ ಬಿತ್ತು ಬ್ರೇಕ್​

|

Updated on: Aug 23, 2020 | 2:51 PM

[lazy-load-videos-and-sticky-control id=”iMAUbXJHcMQ”]] ಬೆಂಗಳೂರು: ವಿದ್ಯಾರ್ಥಿಗಳ ಆನ್​ಲೈನ್ ಕ್ಲಾಸ್‌ಗಾಗಿ ಅನುಕೂಲವಾಗಲೆಂದು ಬಿಬಿಎಂಪಿ ಲ್ಯಾಪ್​ಟಾಪ್ ಖರೀದಿಗೆ ಮುಂದಾಗಿತ್ತು. ಆದರೆ ಲ್ಯಾಪ್​ಟಾಪ್ ಖರೀದಿಯಲ್ಲಿ ಭಾರಿ ಅವ್ಯವಹಾರ ಕಂಡುಬಂದಿದ್ದರಿಂದ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖರೀದಿಗೆ ತಡೆ ನೀಡಿದ್ದಾರೆ. ರಸ್ತೆ, ರಾಜಕಾಲುವೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ವಿದ್ಯಾರ್ಥಿಗಳ ಆನ್​ಲೈನ್ ತರಗತಿಗಳಿಗೆ ಸಹಾಯವಾಗಲೆಂದು ಬಿಬಿಎಂಪಿ ಲ್ಯಾಪ್​ಟಾಪ್ ಖರೀದಿ ಮಾಡಲು ಮುಂದಾಗಿತ್ತು. ಹೀಗಾಗಿ 115 ಕೋಟಿ ರೂಪಾಯಿ ಅಭಿವೃದ್ಧಿ ಹಣದಲ್ಲಿ KEONICS ಸಂಸ್ಥೆಯಿಂದ ಲ್ಯಾಪ್​ಟಾಪ್ ಖರೀದಿಗೆ ಮುಂದಾಗಿದ್ದ ಬಿಬಿಎಂಪಿ, 30ರಿಂದ 35 […]

35 ಸಾವಿರ ರೂ. ಬೆಲೆಬಾಳುವ ಲ್ಯಾಪ್​ಟಾಪ್ 60 ಸಾವಿರಕ್ಕೆ ಖರೀದಿ.. ಅವ್ಯವಹಾರಕ್ಕೆ ಬಿತ್ತು ಬ್ರೇಕ್​
Follow us on

[lazy-load-videos-and-sticky-control id=”iMAUbXJHcMQ”]]

ಬೆಂಗಳೂರು: ವಿದ್ಯಾರ್ಥಿಗಳ ಆನ್​ಲೈನ್ ಕ್ಲಾಸ್‌ಗಾಗಿ ಅನುಕೂಲವಾಗಲೆಂದು ಬಿಬಿಎಂಪಿ ಲ್ಯಾಪ್​ಟಾಪ್ ಖರೀದಿಗೆ ಮುಂದಾಗಿತ್ತು. ಆದರೆ ಲ್ಯಾಪ್​ಟಾಪ್ ಖರೀದಿಯಲ್ಲಿ ಭಾರಿ ಅವ್ಯವಹಾರ ಕಂಡುಬಂದಿದ್ದರಿಂದ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖರೀದಿಗೆ ತಡೆ ನೀಡಿದ್ದಾರೆ.

ರಸ್ತೆ, ರಾಜಕಾಲುವೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ವಿದ್ಯಾರ್ಥಿಗಳ ಆನ್​ಲೈನ್ ತರಗತಿಗಳಿಗೆ ಸಹಾಯವಾಗಲೆಂದು ಬಿಬಿಎಂಪಿ ಲ್ಯಾಪ್​ಟಾಪ್ ಖರೀದಿ ಮಾಡಲು ಮುಂದಾಗಿತ್ತು. ಹೀಗಾಗಿ 115 ಕೋಟಿ ರೂಪಾಯಿ ಅಭಿವೃದ್ಧಿ ಹಣದಲ್ಲಿ KEONICS ಸಂಸ್ಥೆಯಿಂದ ಲ್ಯಾಪ್​ಟಾಪ್ ಖರೀದಿಗೆ ಮುಂದಾಗಿದ್ದ ಬಿಬಿಎಂಪಿ, 30ರಿಂದ 35 ಸಾವಿರ ರೂಪಾಯಿ ಬೆಲೆಬಾಳುವ ಲ್ಯಾಪ್​ಟಾಪ್​ಗೆ, 60 ಸಾವಿರ ರೂಪಾಯಿ ನೀಡಿ ಖರೀದಿಸಲು ಮುಂದಾಗಿತ್ತು ಎಂದು ತಿಳಿದುಬಂದಿದೆ.

ಈ ವಿಚಾರ ತಿಳಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಬಗ್ಗೆ ಸಿಎಂ ಯಡಿಯೂರಪ್ಪರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಅಭಿವೃದ್ಧಿ ಹಣದಲ್ಲಿ ಲ್ಯಾಪ್​ಟಾಪ್ ಖರೀದಿಯ ಅವಶ್ಯಕತೆ ಇಲ್ಲ. ಈ ರೀತಿಯ ದುಂದು ವೆಚ್ಚಕ್ಕೆ ಬ್ರೇಕ್ ಹಾಕುವಂತೆ ಸಿಎಂಗೆ ಮನವರಿಕೆ ಮಾಡಿದ್ದಾರೆ.

ಆಯುಕ್ತರ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಲ್ಯಾಪ್ ಟಾಪ್ ಖರೀದಿ ಮಾಡಲೇಬೇಕು ಎಂದು ಪಟ್ಟು ಹಿಡಿದಿರುವ ಕಾರ್ಪೋರೇಟರ್ಸ್ ಲ್ಯಾಪ್ ಟಾಪ್ ಖರೀದಿ ಮಾಡಿ ಅಥವಾ ಆನ್​ಲೈನ್ ಕ್ಲಾಸ್ ರದ್ದು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ಸರ್ಕಾರದ ಸೂಚನೆಯಂತೆ ಲ್ಯಾಪ್ ಟಾಪ್ ಖರೀದಿ ಮಾಡದಂತೆ ಜಂಟಿ ಆಯುಕ್ತರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.

Published On - 12:02 pm, Sun, 23 August 20