ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮೊರೆಯಿತು ಅಪರಿಚಿತರ ಗುಂಡಿನ ಸದ್ದು!
[lazy-load-videos-and-sticky-control id=”olbfusjQn54″] ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ಅದು ಪೊಲೀಸರ ಗನ್ ಸದ್ದಲ್ಲ. ಅಪರಿಚಿತರ ಗನ್ ಸದ್ದು. ಕೆ.ಆರ್.ಪುರಂನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಫೈರಿಂಗ್ ಮಾಡಿ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಐವರು ಅಪರಿಚಿತರಿಂದ ರಿಯಲ್ ಎಸ್ಟೇಟ್ ಉದ್ಯಮಿ ಆಟೋ ಡ್ರೈವರ್ ಬಾಬು ಎಂಬಾತನ ಮೇಲೆ ಫೈರಿಂಗ್ ನಡೆದಿದೆ. ಗುಂಡು ಹಾರಿಸಿ ಲಾಂಗ್, ಮಚ್ಚುಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಕೆ.ಆರ್.ಪುರಂನ ಖಾಸಗಿ ಆಸ್ಪತ್ರೆಯಲ್ಲಿ […]
[lazy-load-videos-and-sticky-control id=”olbfusjQn54″]
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ಅದು ಪೊಲೀಸರ ಗನ್ ಸದ್ದಲ್ಲ. ಅಪರಿಚಿತರ ಗನ್ ಸದ್ದು. ಕೆ.ಆರ್.ಪುರಂನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಫೈರಿಂಗ್ ಮಾಡಿ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಐವರು ಅಪರಿಚಿತರಿಂದ ರಿಯಲ್ ಎಸ್ಟೇಟ್ ಉದ್ಯಮಿ ಆಟೋ ಡ್ರೈವರ್ ಬಾಬು ಎಂಬಾತನ ಮೇಲೆ ಫೈರಿಂಗ್ ನಡೆದಿದೆ. ಗುಂಡು ಹಾರಿಸಿ ಲಾಂಗ್, ಮಚ್ಚುಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಕೆ.ಆರ್.ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಬಾಬುಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೆ.ಆರ್.ಪುರಂ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಸುಹೇಲ್ ಅಂಡ್ ಟೀಮ್ ನಿಂದ ಕೃತ್ಯ ನಡೆದಿದೆ. ಗಾಯಾಳು ಬೈರತಿ ಬಸವರಾಜ್ ಆತ್ಮೀಯ ಎನ್ನಲಾಗುತ್ತಿದೆ.
ಅಂಗಡಿ ವಿಚಾರಕ್ಕೆ ಫೈರಿಂಗ್: ಸೊಹೇಲ್ ಸ್ನೇಹಿತ ತಡರಾತ್ರಿವರೆಗೆ ಅಂಗಡಿ ಓಪನ್ ಮಾಡ್ತಿದ್ದ. ಹೀಗಾಗಿ ಅಂಗಡಿ ಮುಚ್ಚುವಂತೆ ಆಟೋ ಬಾಬು ತಿಳಿಸಿದ್ದನು. ಇದೇ ವಿಚಾರಕ್ಕೆ ಗಲಾಟೆಯಾಗಿ ನಿನ್ನೆ ರಾತ್ರಿ ಆಟೋ ಬಾಬು ಮೇಲೆ ಸುಹೇಲ್ ಅಂಡ್ ಟೀಮ್ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಐವರು ಆರೋಪಿಗಳು ಪರಾರಿಯಾಗಿದ್ದಾರೆ.
Published On - 9:50 am, Sun, 23 August 20