Loading video

Chitradurga: ಮಹಿಳೆ ಜೊತೆ ಅನುಚಿತ ವರ್ತನೆ ಆರೋಪ, ಬಸ್​ ನಿರ್ವಾಹಕನ ಮೇಲೆ ಹಲ್ಲೆ; ವಿಡಿಯೋ ವೈರಲ್

|

Updated on: Jun 22, 2023 | 8:25 AM

ಮಹಿಳೆ ಜೊತೆ ಅನುಚಿತ ವರ್ತನೆ ಆರೋಪ ಹಿನ್ನಲೆ ಜಿಲ್ಲೆಯ ಚಳ್ಳಕೆರೆ ಪಟ್ಟಣದ ನೆಹರು ವೃತ್ತದಲ್ಲಿ ಬಸ್​ ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿದೆ. ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕ ಚಂದ್ರೇಗೌಡ ಹಲ್ಲೆಗೊಳಗಾದವರು.​

ಚಿತ್ರದುರ್ಗ: ಮಹಿಳೆ ಜೊತೆ ಅನುಚಿತ ವರ್ತನೆ ಆರೋಪ ಹಿನ್ನಲೆ ಜಿಲ್ಲೆಯ ಚಳ್ಳಕೆರೆ ಪಟ್ಟಣದ ನೆಹರು ವೃತ್ತದಲ್ಲಿ ಬಸ್​ ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿದೆ. ಕೆಎಸ್​ಆರ್​ಟಿಸಿ(KSRTC) ಬಸ್ ನಿರ್ವಾಹಕ ಚಂದ್ರೇಗೌಡ ಹಲ್ಲೆಗೊಳಗಾದವರು. ನಿನ್ನೆ(ಜೂ.21) ಚಳ್ಳಕೆರೆಯಿಂದ ಇದೇ ಬಸ್​​ನಲ್ಲಿ ಓರ್ವ ಮಹಿಳೆಯೊಬ್ಬರು ಚಳ್ಳಕೆರೆಯಿಂದ ದಾಬಸ್ ಪೇಟೆಗೆ ತೆರಳುತ್ತಿದ್ದರು. ಈ ವೇಳೆ ದಾಬಸ್​​ಪೇಟೆಯಲ್ಲಿ ಬಸ್ ನಿಲ್ಲಿಸಲು ನಿರ್ವಾಹಕ ಚಂದ್ರೇಗೌಡ ನಕಾರ ಮಾಡಿದ್ದಾರೆ. ದಾಬಸ್​​ಪೇಟೆಯಲ್ಲಿ ಬಸ್​​ ನಿಲ್ಲಿಸದೆ ಮೆಜೆಸ್ಟಿಕ್​​ನಲ್ಲಿ ನಿಲ್ಲಿಸಿದ್ದರು. ಇದನ್ನು ಪ್ರಶ್ನಿಸಿದ ಮಹಿಳೆ ಜೊತೆ ನಿರ್ವಾಹಕ ಅನುಚಿತ ವರ್ತನೆ ಮಾಡಿದ್ದಾರೆಂಬ ಆರೋಪದ ಮೇಲೆ ಇಂದು(ಜೂ.22) ಚಳ್ಳಕೆರೆ‌ ನಿಲ್ದಾಣ ಬಳಿ ನಿರ್ವಾಹಕನಿಗೆ ಮಹಿಳಾ ಸಂಬಂಧಿಕರು ಸೇರಿ ಥಳಿಸಿದ್ದಾರೆ. ಹಲ್ಲೆಗೊಳಗಾದ ಬಸ್ ನಿರ್ವಾಹಕ ಚಂದ್ರೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 22, 2023 08:25 AM