ಅಮರನಾಥನಲ್ಲಿ ನಡೆದ ಮೇಘಸ್ಫೋಟದಿಂದ ಬದುಕುಳಿದ ಬಂದ ಕನ್ನಡಿಗರು ತಮ್ಮ ಭಯಾನಕ ಅನುಭವವನ್ನು ಹೇಳಿಕೊಳ್ಳುತ್ತಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2022 | 5:18 PM

ಈ ಮಹಿಳೆ ತಾವು ಬದುಕಿಳಿದಿದ್ದು ಪವಾಡಸದೃಶ್ಯ ಎಂದು ಹೇಳುತ್ತಿದ್ದಾರೆ. ಅವರ ಮತ್ತು ಸಾವಿನ ನಡುವೆ ಕೇವಲ ಕೂದಲೆಳೆಯ ಅಂತರವಿತ್ತು ಅಂತ ಅವರು ಹೇಳುತ್ತಾರೆ. ಅವರೊಂದಿಗೆ ಪ್ರಕಾಶ ಹೆಸರಿನ ಮತ್ತೊಬ್ಬ ಕನ್ನಡಿಗರಿದ್ದಾರೆ. ಅವರಿಂದಲೇ ತಾನು ಬದುಕುಳಿದಿದ್ದು ಎಂದು ಮಹಿಳೆ ಹೇಳುತ್ತಾರೆ.

ಅಮರನಾಥ:  ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಅಮರನಾಥ ಗುಹೆ (Amarnath cave) ಬಳಿ ಮೇಘಸ್ಪೋಟದಿಂದ (cloudburst) ಹಲವಾರು ಜನ ಬಲಿಯಾಗಿದ್ದು ನಿಮಗೆ ಗೊತ್ತಿದೆ. ಆದರೆ ಬದುಕುಳಿದು ಬಂದವರ ಪೈಕಿ ಕನ್ನಡಿಗರು (Kannadigas) ತಮ್ಮ ಭಯಾನಕ, ದುಸ್ವಪ್ನದಂಥ ಅನುಭವವನ್ನು ಟಿವಿ ಕನ್ನಡ ವಾಹಿನಿಯ ದೆಹಲಿ ವರದಿಗಾರ ಹರೀಷ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಈ ಮಹಿಳೆ ತಾವು ಬದುಕಿಳಿದಿದ್ದು ಪವಾಡಸದೃಶ್ಯ ಎಂದು ಹೇಳುತ್ತಿದ್ದಾರೆ. ಅವರ ಮತ್ತು ಸಾವಿನ ನಡುವೆ ಕೇವಲ ಕೂದಲೆಳೆಯ ಅಂತರವಿತ್ತು ಅಂತ ಅವರು ಹೇಳುತ್ತಾರೆ. ಅವರೊಂದಿಗೆ ಪ್ರಕಾಶ ಹೆಸರಿನ ಮತ್ತೊಬ್ಬ ಕನ್ನಡಿಗರಿದ್ದಾರೆ. ಅವರಿಂದಲೇ ತಾನು ಬದುಕುಳಿದಿದ್ದು ಎಂದು ಮಹಿಳೆ ಹೇಳುತ್ತಾರೆ. ಮೇಘಸ್ಪೋಟಗೊಂಡಾಗ ಅವರ ಕಣ್ಣೆದುರೇ ಕೆಲವು ಜನ ಕೊಚ್ಚಿಕೊಂಡು ಹೋದರಂತೆ.

ಇದನ್ನೂ ಓದಿ:  ರಾಹುಲ್ ಗಾಂಧಿ ಬಗ್ಗೆ ತಪ್ಪಾದ ಸುದ್ದಿಯ ವಿಡಿಯೊ ಶೇರ್ ಮಾಡಿರುವ ಬಿಜೆಪಿ ಕ್ಷಮೆ ಕೇಳಬೇಕು: ಕಾಂಗ್ರೆಸ್ ಒತ್ತಾಯ