Sri Lanka Crisis: ಬೈಕಿಂದ ಇಳಿದು ಹೆಲ್ಮೆಟ್ ಎಸೆದು ಪ್ರತಿಭಟನಾಕಾರರನ್ನು ಬೆಂಬಲಿಸಿದ ಶ್ರೀಲಂಕಾದ ಪೊಲೀಸಪ್ಪ ವೈರಲ್

Sri Lanka Crisis: ಬೈಕಿಂದ ಇಳಿದು ಹೆಲ್ಮೆಟ್ ಎಸೆದು ಪ್ರತಿಭಟನಾಕಾರರನ್ನು ಬೆಂಬಲಿಸಿದ ಶ್ರೀಲಂಕಾದ ಪೊಲೀಸಪ್ಪ ವೈರಲ್

TV9 Web
| Updated By: Rakesh Nayak Manchi

Updated on:Jul 09, 2022 | 7:35 PM

ಶ್ರೀಲಂಕಾ ದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಆರ್ಥಿಕ ಬಿಕ್ಕಟ್ಟು ಖಂಡಿಸಿ ರಸ್ತೆಯಲ್ಲಿ ಸಾಗುತ್ತಿದ್ದ ಪ್ರತಿಭಟನಾ ಮೆರವಣಿಗೆಗೆ ಪೊಲೀಸ್ ಸಿಬ್ಬಂದಿಯೊಬ್ಬರು ಹೆಲ್ಮೆಟ್ ಅನ್ನು ನೆಲಕ್ಕೆ ಎಸೆದು ಬೆಂಬಲ ಸೂಚಿಸಿದ ವಿಡಿಯೋ ವೈರಲ್ ಆಗುತ್ತಿದೆ.

ದ್ವೀಪರಾಷ್ಟ್ರ ಶ್ರೀಲಂಕಾ ದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಆರ್ಥಿಕ ಬಿಕ್ಕಟ್ಟು ಖಂಡಿಸಿ ಕೊಲಂಬೋದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಲಂಕಾದ ಅಧ್ಯಕ್ಷರ ಬಂಗಲೆಗೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿದ್ದು, ಅಲ್ಲಿ ಸೆಲ್ಫಿ ತೆಗೆಯುವುದು, ಈಜುಕೊಳದಲ್ಲಿ ಈಜಾಡುವುದು ಇತ್ಯಾದಿಗಳನ್ನು ಮಾಡಿದ್ದಾರೆ. ಅಲ್ಲದೆ ಬಂಗಲೆಯಲ್ಲಿದ್ದ ವಸ್ತುಗಳನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ. ಅದಾಗ್ಯೂ ರಸ್ತೆಯಲ್ಲಿ ಸಾಗುತ್ತಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಬೈಕ್​ನಲ್ಲಿ ಬಂದ ಪೊಲೀಸ್ ಸಿಬ್ಬಂದಿಯೊಬ್ಬರು ಬೈಕ್​ ಅನ್ನು ಪಾರ್ಕ್ ಮಾಡಿ ಹೆಲ್ಮೆಟ್ ಅನ್ನು ನೆಲಕ್ಕೆ ಎಸೆದು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. ಇದನ್ನ ಗಮನಿಸಿದ ಕೆಲವು ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಬಳಿ ಬಂದು ಘೋಷಣೆಗಳನ್ನು ಕೂಗಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

Published on: Jul 09, 2022 07:35 PM