Amarnath Shrine Cloudburst: ಅಮರನಾಥ ಯಾತ್ರೆ ವೇಳೆ ಮೇಘ ಸ್ಫೋಟ, ಆತಂಕದ ದೃಶ್ಯಗಳು ಇಲ್ಲಿವೆ ನೋಡಿ
ಜಮ್ಮು-ಕಾಶ್ಮೀರದ ಅಮರನಾಥ ಕ್ರೇತ್ರದ ಬಳಿ ಮೇಘ ಸ್ಫೋಟವಾಗಿದೆ. ಮೇಘಸ್ಫೋಟದಿಂದ ಅಮರನಾಥ ಗುಹೆ ಬಳಿ ದಿಢೀರ್ ಪ್ರವಾಹವಾಗಿದ್ದು ಉಕ್ಕಿಹರಿದ ಹಳ್ಳದಲ್ಲಿ 25ಕ್ಕೂ ಹೆಚ್ಚು ಟೆಂಟ್ಗಳು ಕೊಚ್ಚಿಹೋಗಿವೆ.
ಜಮ್ಮು-ಕಾಶ್ಮೀರದ ಅಮರನಾಥ ಕ್ರೇತ್ರದ ಬಳಿ ಮೇಘ ಸ್ಫೋಟವಾಗಿದೆ. ಮೇಘಸ್ಫೋಟದಿಂದ ಅಮರನಾಥ ಗುಹೆ ಬಳಿ ದಿಢೀರ್ ಪ್ರವಾಹವಾಗಿದ್ದು ಉಕ್ಕಿಹರಿದ ಹಳ್ಳದಲ್ಲಿ 25ಕ್ಕೂ ಹೆಚ್ಚು ಟೆಂಟ್ಗಳು ಕೊಚ್ಚಿಹೋಗಿವೆ. ಘಟನೆಯಲ್ಲಿ ಅಮರನಾಥ ಯಾತ್ರೆಗೆ ಬಂದಿದ್ದ ಮೂವರು ಪುರುಷರು, ಇಬ್ಬರು ಮಹಿಳಾ ಯಾತ್ರಿಕರು ಸೇರಿ ಐವರು ಭಕ್ತರು ಸಾವನ್ನಪ್ಪಿದ್ದಾರೆ. ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಹಲವು ಯಾತ್ರಿಕರು ನಾಪತ್ತೆಯಾಗಿದ್ದಾರೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್, ಐಟಿಬಿಪಿ, ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಏರ್ಲಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕಾಶ್ಮೀರ ಐಜಿಪಿ ಮಾಹಿತಿ ನೀಡಿದ್ದಾರೆ.