ಕೆಆರ್ಎಸ್ ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿಲ್ಲ: ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್
ಕೆಆರ್ಎಸ್ ಜಲಾಶಯದಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಜೆಡಿಎಸ್ ಶಾಸಕ ಶ್ರೀಕಂಠಯ್ಯ ಅವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು(KRS Dam) ವಿಚಾರದಲ್ಲಿ ರಾಜಕಾರಣಿಗಳ ನಡುವೆ ಮಾತಿನ ಚಕಾಮಕಿ ನಡೆಯುತ್ತಲೇ ಇದೆ. ಇದೀಗ ಕೆಆರ್ಎಸ್ ಜಲಾಶಯದಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಜೆಡಿಎಸ್ ಶಾಸಕ ಶ್ರೀಕಂಠಯ್ಯ ಅವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಕೆಆರ್ಎಸ್ ಅಣೆಕಟ್ಟು ಅವಲಂಬಿತವಾಗಿರುವ ರೈತರು ಹೆದರುವ ಅವಶ್ಯಕತೆ ಇಲ್ಲ. ಕೆಲವರು ಮಾತನಾಡುವಾಗ ಅಳೆದು ತೂಗಿ ಮಾತನಾಡಬೇಕು. ರೈತರನ್ನು ಭಯ ಬೀಳಿಸುವ ರೀತಿಯಲ್ಲಿ ಮಾತನಾಡಬಾರದು ಎಂದು ಮಂಡ್ಯದಲ್ಲಿ ಪ್ರವಾಹ ಪ್ರತಿಕೂಲ ಪರಿಣಾಮ ನಿರ್ವಹಣೆ ಕಾರ್ಯಕ್ರಮದಲ್ಲಿ ಶಾಸಕರು ಹೇಳಿದರು. ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಸಾರ ಮಹೇಶ್, ಡಾ.ಕೆ ಅನ್ನದಾನಿ ಹಾಗೂ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ, ಕುಸಿದ ಗುಡ್ಡ, ದಿಕ್ಕಾಪಾಲಾಗಿ ಓಡಿದ ಜನ
Latest Videos