ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ, ಕುಸಿದ ಗುಡ್ಡ, ದಿಕ್ಕಾಪಾಲಾಗಿ ಓಡಿದ ಜನ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಚೆಂಡಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ನೀಡಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದ ವಾಣಿಜ್ಯ ಸಮುಚ್ಚಯ ಸಮೀಪ ಗುಡ್ಡ (Collapsed) ಕುಸಿದಿದೆ. ಕೊಡಗಿನಲ್ಲಿ ಇತ್ತೀಚೆಗೆ ಭೂಕಂಪವಾಗಿತ್ತು. ಅದಾದ ನಂತರ ಇಲ್ಲಿಯೂ ಮಣ್ಣು ಸಡಿಲವಾಗಿತ್ತು. ನೋಡನೋಡುತ್ತಿದ್ದಂತೆ ಗುಡ್ಡ ಕುಸಿದ್ದು, ಜನರು ಹೆದರಿ ಓಡಿದ್ದಾರೆ. ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ಬೈಕ್ಗಳ ಮೇಲೆ ಗುಡ್ಡ ಕುಸಿದಿದ್ದರಿಂದ ವಾಹನಗಳು ಜಖಂ ಆಗಿವೆ. ಮಂಗಳೂರು ಸಮೀಪದ ಕಣ್ಣೂರು ಬಳಿ ಇರುವ ಬಲ್ಲೂರು ಗುಡ್ಡ ಕುಸಿದಿದ್ದು, ಗುಡ್ಡ ಕುಸಿದಿಂದ 15ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಅದೇ ರೀತಿಯಾಗಿ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯ ಆರ್ಭಟ ಮುಂದುವರೆದಿದ್ದು, ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾಗಿದೆ. ಕಾರವಾರ ನಗರದ ಬಿಣಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸುಮಾರು 5 ಕಿ.ಮೀ.ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿವೆ.
ಇದನ್ನೂ ಓದಿ: Bengaluru Weather: ಬೆಂಗಳೂರಿನಲ್ಲಿ ತುಂತುರು ಮಳೆಯ ಜೊತೆಗೆ ಕೊರೆಯುವ ಚಳಿ
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆ:
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಚೆಂಡಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ನೀಡಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿರುವ ಮಾಹಿತಿಯನ್ನು KSNDMC ಟ್ವೀಟ್ ಮಾಡಿದೆ. ರಾಜ್ಯದಲ್ಲೇ ಅತೀ ಹೆಚ್ಚು 260 ಮಿಮೀ ಮಳೆ ದಾಖಲಾಗಿದೆ. ಜುಲೈ 7ರ ಬೆಳಿಗ್ಗೆ 8:30ರಿಂದ ಜುಲೈ 8ರ ಬೆಳಿಗ್ಗೆ 8:30ರ ಅವಧಿಯಲ್ಲಿ ಭಾರೀ ಮಳೆ ಆಗಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ.
24 ಗಂಟೆಗಳ #ಕರ್ನಾಟಕದ ಮಳೆ ನಕ್ಷೆ: 7th ಜುಲೈ 2022ರ 8.30AM ರಿಂದ 8th ಜುಲೈ 2022 ರ 8.30AM ರವರೆಗೆ, ಅತ್ಯಧಿಕ 260ಮಿಮೀ ಮಳೆ @ಉತ್ತರ ಕನ್ನಡ_ಕಾರವಾರ _ಚೆಂಡಿಯಾ. pic.twitter.com/fDvvqTBo7A
— KSNDMC (@KarnatakaSNDMC) July 8, 2022
ಇದನ್ನೂ ಓದಿ; Amboli Ghat: ಬಿರುಸು ಮಳೆಗೆ ಮೈದುಂಬಿದ ಅಂಬೋಲಿ ಘಾಟ್, ಜಲಪಾತ ನೋಡಲು ಪ್ರವಾಸಿಗರ ದಂಡು
ತಗ್ಗರಸೆ ಗ್ರಾಮದಲ್ಲಿ ವರುಣನ ಅಬ್ಬರ: ಮನೆಗೆ ನುಗ್ಗಿದ ನೀರು:
ತಗ್ಗರಸೆ ಗ್ರಾಮದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಮನೆ ಮಾಲೀಕ ಮಧುವೀರ ಅಳಲು ತೋಡಿಕೊಂಡಿದ್ದಾರೆ. ಮೂರು ದಿನದ ಹಿಂದೆ ಏಕಾಏಕಿ ಮಳೆ ಬಂದುಬಿಡ್ತು. ಮನೆಯಲ್ಲಿದ್ದ 500 ತೆಂಗಿನ ಕಾಯಿ ಕೊಚ್ಚಿಕೊಂಡು ಹೋಯ್ತು. ದವಸ ಧಾನ್ಯ ಎಲ್ಲಾ ನೆಂದು ಹಾಳಾಗಿದೆ. ಮನೆಯಲ್ಲಿದ್ದ ಮಹಿಳೆಯರನ್ನ ಬೇರೆ ಕಡೆ ಕಳಿಸಿದ್ದೇವೆ. ನಾವು ಇಬ್ಬರು ಪುರುಷರು ಮಾತ್ರ ಉಳಿದುಕೊಂಡಿದ್ದೇವೆ. ಮತ್ತೆ ಮಳೆ ಜಾಸ್ತಿ ಆದರೆ ಮನೆಗೆ ನೀರು ನುಗ್ಗುತ್ತೆ ಎಂದು ಅಳಲು ತೋಡಿಕೊಂಡಿದ್ದಾರೆ.
Published On - 11:52 am, Fri, 8 July 22