TV9 Education Summit 2022 Highlights: ಮಂಗಳೂರು ಒಂದು ಎಜುಕೇಶನ್ ಹಬ್ ಆಗಿ ಮಾರ್ಪಟ್ಟಿದೆ: ಪೊಲೀಸ್ ಆಯುಕ್ತ ಎನ್. ಶಶಿಕುಮಾರ
TV9 Education Expo Mangalore 2022 Highlights: ಮಂಗಳೂರಿನ ಡಾ. ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಟಿವಿ9 ಕನ್ನಡ ವಾಹಿನಿಯು ಆಯೋಜಿಸಿದ ಟಿವಿ9 ಎಜುಕೇಶನ್ ಸಮ್ಮಿಟ್-2022 ಇಂದಿನಿಂದ ಆರಂಭಗೊಂಡಿದ್ದು, ನಾಳೆ ಕೊನೆಗೊಳ್ಳಲಿದೆ. ಸಮ್ಮಿಟ್ ಅನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಉದ್ಘಾಟಿಸಿದರು.

ಮಂಗಳೂರು: ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಟಿವಿ9 ಎಜುಕೇಶನ್ ಸಮ್ಮಿಟ್-2022 (Education Summit-2022) ನಡೆಸಿದ್ದ ಟಿವಿ9 ಕನ್ನಡ ವಾಹಿನಿಯು ಅದೇ ಕಾರ್ಯಕ್ರಮವನ್ನು ಇಂದು ಮತ್ತು ನಾಳೆ (ಜು.9 ಮತ್ತು ಜು.10) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿರುವ ಡಾ. ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿದೆ. ಈ ಸಮ್ಮಿಟ್ ಅನ್ನು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಉದ್ಘಾಟಿಸಿದರು. ರಾಜ್ಯ ಮತ್ತು ದೇಶದ 40ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸಮ್ಮಿಟ್ನಲ್ಲಿ ಭಾಗವಹಿಸಲಿದ್ದು, ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೂ ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶವಿದೆ. ಈ ಎಜುಕೇಶನ್ ಎಕ್ಸ್ಪೋ ಮೂಲಕ ನೂರಾರು ಕೋರ್ಸ್‌ಗಳ ಮಾಹಿತಿ ನೀಡಲಾಗುತ್ತಿದೆ. ಟಿವಿ9 ಎಕ್ಸ್‌ಪೋನಲ್ಲಿ ಹಲವು ವಿವಿ, ಕಾಲೇಜುಗಳ ಸ್ಟಾಲ್ಸ್, ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೆ ಎನು? ಎನ್ನುವವರಿಗೆ ಮಾಹಿತಿ ನೀಡಲಾಗುತ್ತಿದ್ದು, ಉಚಿತ ಪ್ರವೇಶ ನೀಡಲಾಗುತ್ತಿದೆ. ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್ ಎಕ್ಸ್ಪೋದಲ್ಲಿ ಭಾಗವಹಿಸಿದ್ದು, ವಿವಿಧ ಕ್ಷೇತ್ರದ ಪರಿಣಿತರಿಂದ ನಿಮಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ. ಜೊತೆಗೆ ಎಕ್ಸ್ಪೋದಲ್ಲಿ ಭಾಗವಹಿಸಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕಲ್ ಬೈಕ್, ಸ್ಮಾರ್ಟ್ಫೋನ್ ಹಾಗೂ ಗಿಫ್ಟ್ ವೋಚರ್ಗಳನ್ನು ಸಹ ಗೆಲ್ಲಬಹುದುದಾಗಿದೆ.
Published On - 11:27 am, Sat, 9 July 22




