ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲ್ಲುತ್ತಿಲ್ಲ ಮಳೆ, ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ, ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಕಾರವಾರ, ಅಂಕೋಲಾ, ಕುಮಟಾ, ಸಿದ್ದಾಪುರ ಮತ್ತು ಭಟ್ಕಳ ಭಾಗಗಳಲ್ಲೂ ಬಿಟ್ಟೂಬಿಡದೆ ಮಳೆ ಸುರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) ಮಳೆ ಧಾರಾಕಾರವಾಗಿ ಸುರಿಯುವುದನ್ನು ಮುಂದುವರಿಸಿದೆ. ಅಘನಾಶಿನಿ (Aghanashini), ಗಂಗಾವಳಿ, ಬಡಣಗಣಿ ಮತ್ತು ಶರಾವತಿ (Sharavathi) ನದಿಗಳು ಉಕ್ಕಿ ಹರಿಯುತ್ತಿವೆ. ಅಘನಾಶಿನಿ ನದಿಯಲ್ಲಿ ನೀರು ಅಪಾಯಮಟ್ಟ ಮರಿ ಹರಿಯುತ್ತಿರುವುದರಿಂದ ಹೊನ್ನಾವರ ತಾಲ್ಲೂಕಿನ 5 ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡು ಜನ ಕಂಗಾಲಾಗಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಸಿದ್ದಾಪುರ ಮತ್ತು ಭಟ್ಕಳ ಭಾಗಗಳಲ್ಲೂ ಬಿಟ್ಟೂಬಿಡದೆ ಮಳೆ ಸುರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಇದನ್ನೂ ಓದಿ: Viral Video: ಮ್ಯಾಂಗ್ರೋವ್ ಕಾಡುಗಳ ಮರುಸ್ಥಾಪಿಸುವ ಫಿಶ್ಬೋನ್ ಚಾನೆಲ್ ಪ್ಲಾಂಟೇಶನ್ ವಿಧಾನದ ವಿಡಿಯೋ ವೈರಲ್
Latest Videos