ಪಿ ಎಸ್ ಐ ನೇಮಕಾತಿ: ಯಾವ ಅಧಿಕಾರಿ ಯಾವ್ಯಾವ ಸಚಿವನನ್ನು ಯಾವ ಹೋಟೆಲ್ನಲ್ಲಿ ಭೇಟಿಯಾಗಿದ್ದು ಅಂತ ಗೊತ್ತಿದೆ: ಡಿಕೆಶಿ
ಯಾವ್ಯಾವ ಅಧಿಕಾರಿ ಯಾವ್ಯಾವ ಸಚಿವನನ್ನು ಎಲ್ಲಿ ಭೇಟಿಯಾಗಿದ್ದಾನೆ ಅಂತ ನಮ್ಮಲ್ಲಿ ದಾಖಲೆಗಳಿವೆ ಎಂದು ಶಿವಕುಮಾರ ಹೇಳಿದರು.
ಪಿಎಸ್ ಐ ನೇಮಕಾತಿ ಅಕ್ರಮಕ್ಕೆ (PSI Recruitment Scam) ಸಂಬಂಧಿಸಿದಂತೆ ಕಾಂಗ್ರೆಸ್ ಪ್ರತಿಭಟನೆ ಮಾಡುವುದನ್ನು ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ನೇತೃತ್ವದಲ್ಲಿ ಪಕ್ಷದ ನಾಯಕರು ವಿಧಾನ ಸೌಧ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ (Gandhi statue) ಬಳಿ ಮತ್ತೊಂದು ಸುತ್ತಿನ ಪ್ರತಿಭಟನೆಯನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಶಿವಕುಮಾರ ಅವರು, ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೂಲಕ ಸರ್ಕಾರಕ್ಕೆ ಅನುಕೂಲವಾಗುವಂಥ ಹೇಳಿಕೆಗಳನ್ನು ಮಾತ್ರ ತನಿಖಾಧಿಕಾರಿಗಳು ಪಡೆಯುತ್ತಿದ್ದಾರೆ. ಆದರೆ, ಯಾವ್ಯಾವ ಅಧಿಕಾರಿ ಯಾವ್ಯಾವ ಸಚಿವನನ್ನು ಎಲ್ಲಿ ಭೇಟಿಯಾಗಿದ್ದಾನೆ ಅಂತ ನಮ್ಮಲ್ಲಿ ದಾಖಲೆಗಳಿವೆ ಎಂದು ಹೇಳಿದರು.
ಇದನ್ನೂ ಓದಿ: ಮಳೆ ಆರ್ಭಟ: ಶುಕ್ರವಾರ ಡಿಸಿಗಳೊಂದಿಗೆ ಸಿಎಂ ಬೊಮ್ಮಾಯಿ ತುರ್ತು ವಿಡಿಯೋ ಸಂವಾದ
Latest Videos