SM Krishna No More: ಅಗ್ನಿಸ್ಪರ್ಶ ಮಾಡಿದ ಮೊಮ್ಮಗ ಅಮರ್ತ್ಯ ಹೆಗಡೆ, ಪಂಚಭೂತಗಳಲ್ಲಿ ಲೀನರಾದ ಎಸ್ ಎಂ ಕೃಷ್ಣ 

|

Updated on: Dec 11, 2024 | 7:58 PM

SM Krishna No More: ಎಸ್ ಎಂ ಕೃಷ್ಣ ಅವರ ಅಂತಿಮ ಸಂಸ್ಕಾರದ ಪೂರ್ತಿಗೊಂಡ ಬಳಿಕ ಅವರ ಪತ್ನಿ ಪ್ರೇಮ ಅವರು ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ನಡೆದು ಹೋಗುವ ದೃಶ್ಯ ಮನಕಲುಕುವಂತಿತ್ತು. ತಮ್ಮ ಅಗಾಧ ನೋವಿನಲ್ಲೂ ಅವರು ತಮ್ಮನ್ನು ವಂದಿಸಿದವರಿಗೆ ಪ್ರತಿವಂದನೆ ಹೇಳುತ್ತಿದ್ದರು. ಆದರೆ ಆ ಸ್ಥಳದಲ್ಲಿ ಕೆಲವರು ಪಾದಮುಟ್ಟಿ ನಮಸ್ಕರಿಸಿದ್ದು ಅವರಿಗೆ ಸರಿಯೆನಿಸಲಿಲ್ಲ.

ಮಂಡ್ಯ: ತೊಂಬತ್ತೆರಡು ವರ್ಷಗಳ ಸಾರ್ಥಕ ಬದುಕಿ ನಡೆಸಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ತಮ್ಮ ಹುಟ್ಟೂರು ಸೋಮನಹಳ್ಳಿಯಲ್ಲಿ ಪಂಚಭೂತಗಳಲ್ಲಿ ಲೀನವಾದರು. ಆಗಲೇ ವರದಿ ಮಾಡಿರುವಂತೆ ಅವರು ಮೊಮ್ಮಗ ಅಮರ್ತ್ಯ ಹೆಗಡೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅದರೆ ವೈದಿಕ ಭಾನುಪ್ರಕಾಶ್ ಶರ್ಮ ಅವರು ಎಸಗಿದ ಎಡವಟ್ಟಿನಿಂದಾಗಿ ಅಮರ್ತ್ಯ ಎರಡೆರಡು ಬಾರಿ ಚಿತೆಯನ್ನು ಸುತ್ತಬೇಕಾಯಿತು. ಡಿಸಿಎಂ ಡಿಕೆ ಶಿವಕುಮಾರ್ ತಾವು ಆದರ್ಶವಾಗಿಟ್ಟುಕೊಂಡಿದ್ದ ಎಸ್ ಎಂ ಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸುವಾಗ ಭಾವುಕರಾದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SM Krishna No More: ಅಗಲಿದ ನಾಯಕನ ಪತ್ನಿ ಪ್ರೇಮ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ