ಭರ್ಜರಿ ಆಫರ್ಗಳ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಕೇವಲ ಒಂದು ವಾರ ದೂರ, ನೀವು ತಯಾರಾ?
ಸೇಲ್ ಅಥವಾ ಆಫರ್ ಅಂದಾಕ್ಷಣ ನಾವು ಮೊದಲು ಯೋಚಿಸೋದು ಮೊಬೈಲ್ ಫೋನ್ಗಳ ಬಗ್ಗೆ. ಅದರಲ್ಲೂ ವಿಶೇಷವಾಗಿ ಮಕ್ಕಳ ಆನ್ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಫೋನ್ಗಳ ಅವಶ್ಯಕತೆ ಜಾಸ್ತಿಯೇ ಇದೆ ಅಂತ ಹೇಳಬೇಕು.
ನಾವೆಲ್ಲ ಬಹಳ ಕಾತುರದಿಂದ ನಿರೀಕ್ಷಿಸುತ್ತಿದ್ದ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಬಂದೇ ಬಿಟ್ಟಿತು. ಆಫರ್ ಮತ್ತು ಡಿಸ್ಕೌಂಟ್ಗಳ ಮಹಾಮೇಳ ಶುರುವಾಗಲು ಕೇವಲ ಒಂದು ವಾರ ಮಾತ್ರ ಬಾಕಿ. ಹೌದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅಕ್ಟೋಬರ್ 4ರಿಂದ ಆರಂಭವಾಗಲಿದೆ ಮತ್ತು ಒಂದು ತಿಂಗಳು ಅವಧಿಗೆ ಸೇಲ್ ಜಾರಿಯಲ್ಲಿರುತ್ತದೆ. ಕೋಟ್ಯಾಂತರ ಭಾರತೀಯರು ವರ್ಷವಿಡೀ ಇದಕ್ಕಾಗಿ ಕಾಯುವುದು ಸುಳ್ಳಲ್ಲ. ಬಟ್ಟೆಗಳು, ಗ್ಯಾಜೆಟ್ ಗಳು, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಉಪಕರಣಗಳು-ಹೀಗೆ ಎಲ್ಲ ವಸ್ತುಗಳ ಮೇಲೆ ಅಮೆಜಾನ್ ಆಕರ್ಷಕ ಆಫರ್ಗಳನ್ನು ನೀಡುತ್ತದೆ.
ಸೇಲ್ ಅಥವಾ ಆಫರ್ ಅಂದಾಕ್ಷಣ ನಾವು ಮೊದಲು ಯೋಚಿಸೋದು ಮೊಬೈಲ್ ಫೋನ್ಗಳ ಬಗ್ಗೆ. ಅದರಲ್ಲೂ ವಿಶೇಷವಾಗಿ ಮಕ್ಕಳ ಆನ್ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಫೋನ್ಗಳ ಅವಶ್ಯಕತೆ ಜಾಸ್ತಿಯೇ ಇದೆ ಅಂತ ಹೇಳಬೇಕು. ಪ್ರತಿವರ್ಷದಂತೆ ಈ ಸಲವೂ ಅಮೆಜಾನ್ ಸ್ಮಾರ್ಟ್ ಫೋನ್ಗಳ ಮೇಲೆ ಭರ್ಜರಿ ಆಫರ್ಗಳನ್ನು ನೀಡುತ್ತಿದೆ. ಯಾವ್ಯಾವ ಫೋನ್ಗಳು ಎಷ್ಟೆಷ್ಟು ಬೆಲೆಗೆ ಸಿಗುತ್ತಿವೆ ಅನ್ನೋದನ್ನು ನೋಡೋಣ.
4ಜಿಬಿ ರ‍್ಯಾಮ್, 128 ಜಿಬಿ ಮೆಮೊರಿ ರೆಡ್ಮಿ 9 ಪ್ರೈಮ್ ಫೋನ್ ನಿಮಗೆ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ರೂ. 10,449 ಗಳಿಗೆ ಸಿಗಲಿದೆ.
3ಜಿಬಿ ರ‍್ಯಾಮ್ 32ಜಿಬಿ ಮೆಮೊರಿಯ ನೋಕಿಯಾ ಸಿ20 ಪ್ಲಸ್ ಫೋನ್ ರೂ. 8,999 ಗಳಿಗೆ ಮಾರಾಟವಾಗಲಿದೆ. 4 ಜಿಬಿ ರ‍್ಯಾಮ್, 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಟೆಕ್ನೊ ಸ್ಪಿರಿಟ್ 7ಟಿ ಫೋನ್ ರೂ. 8,499 ರಿಂದ ರೂ. 9,499 ಗಳಿಗೆ ಸಿಗಲಿದೆ.
ಹಾಗೆಯೇ, 2 ಜಿಬಿ ರ‍್ಯಾಮ್ 32 ಜಿಬಿ ಸ್ಟೋರೇಜ್ನ ರೆಡ್ಮಿ ಶಾಮಿ 9ಎ ಪೋನ್ ಕೇವಲ ರೂ 6,999ಕ್ಕೆ ಸಿಗಲಿದೆ. ಇವಲ್ಲದೆ ಇನ್ನೂ ಅನೇಕ ಬ್ರ್ಯಾಂಡ್ ಮತ್ತು ಮಾಡೆಲ್ಗಳ ಮೇಲೆ ದೊಡ್ಡ ಆಫರ್ಗಳು ಸಿಗಲಿವೆ.
ಇದನ್ನೂ ಓದಿ: Video: ಬೀದಿನಾಯಿ ಒಂದಕ್ಕೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ; ಆಪ್ತ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ