Amazon Prime Day: ಅಮೆಜಾನ್ ಪ್ರೈಮ್ ಡೇ ಸೇಲ್ನಲ್ಲಿ ಭರ್ಜರಿ ಸ್ಮಾರ್ಟ್ಫೋನ್ ಸೇಲ್!
ಅಮೆಜಾನ್ ಪ್ರೈಮ್ ಡೇ ಸೇಲ್ನ ಅಂಕಿ ಅಂಶಗಳನ್ನು ಕಂಪನಿ ಬಿಡುಗಡೆ ಮಾಡಿದ್ದು, ಪ್ರತಿ ಸೆಕೆಂಡ್ಗೆ 5 ಸ್ಮಾರ್ಟ್ಫೋನ್ ಮಾರಾಟ ಮಾಡಿರುವುದಾಗಿ ಹೇಳಿದೆ. ಕಳೆದ ವರ್ಷದ ಪ್ರೈಮ್ ಡೇ ಈವೆಂಟ್‌ಗೆ ಹೋಲಿಸಿದರೆ ಈ ಬಾರಿ 14% ಹೆಚ್ಚು ಸದಸ್ಯರು ಶಾಪಿಂಗ್ ಮಾಡಿದ್ದಾರೆ.
ಜುಲೈ 15 ಮತ್ತು 16ರಂದು ಎರಡು ದಿನಗಳ ಕಾಲ ನಡೆದ ಅಮೆಜಾನ್ ಪ್ರೈಮ್ ಡೇ ಸೇಲ್ನ ಅಂಕಿ ಅಂಶಗಳನ್ನು ಕಂಪನಿ ಬಿಡುಗಡೆ ಮಾಡಿದ್ದು, ಪ್ರತಿ ಸೆಕೆಂಡ್ಗೆ 5 ಸ್ಮಾರ್ಟ್ಫೋನ್ ಮಾರಾಟ ಮಾಡಿರುವುದಾಗಿ ಹೇಳಿದೆ. ಕಳೆದ ವರ್ಷದ ಪ್ರೈಮ್ ಡೇ ಈವೆಂಟ್‌ಗೆ ಹೋಲಿಸಿದರೆ ಈ ಬಾರಿ 14% ಹೆಚ್ಚು ಸದಸ್ಯರು ಶಾಪಿಂಗ್ ಮಾಡಿದ್ದಾರೆ. ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿದ ಒನ್‌ಪ್ಲಸ್ ನಾರ್ಡ್ 3 5ಜಿ, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಂ34 5ಜಿ, ಮೊಟೊರೊಲಾ ರೇಝರ್ 40 ಸಿರೀಸ್, ರಿಯಲ್‌ಮಿ ನಾರ್ಝೋ 60 ಸಿರೀಸ್ ಮತ್ತು ಐಕ್ಯೂ ನಿಯೋ 7 ಪ್ರೋ 5ಜಿ ಫೋನ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಜತೆಗೆ ಜನರು ಡಿಸ್ಕೌಂಟ್ ಮಾತ್ರವಲ್ಲದೆ, ಕ್ಯಾಶ್ಬ್ಯಾಕ್, ಎಕ್ಸ್ಚೇಂಜ್ ಕೊಡುಗೆಗಳ ಪ್ರಯೋಜನ ಪಡೆದುಕೊಂಡಿದ್ದಾರೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ.
Latest Videos