ಹಿಂದೆಂದೂ ಕೇಳರಿಯದ ಸಂಗತಿಯಿದು, ವಿಜ್ಞಾನಿಗಳು ಸೃಷ್ಟಿಸಿದ ಜೀವಂತ ರೊಬೊಗಳು ತಮ್ಮ ಪ್ರತಿರೂಪಗಳನ್ನು ತಾವೇ ಸೃಷ್ಟಿಸಿಕೊಳ್ಳಬಲ್ಲವು!!
ಜಿನೋಬಾಟ್ಸ್ ಗಳನ್ನು ಹೇಗೆ ಸುಲಭವಾದ ಟಾಸ್ಕ್ಗಳನ್ನು ನಿಭಾಯಿಸಲು ವಿನ್ಯಾಸಗೊಳಿಸಬಹುದು ಅಂತ ವಿವರಿಸುವ ಪ್ರಯೋಗಗಳನ್ನು ವಿಜ್ಞಾನಿಗಳಿಗೆ ಈ ಮೊದಲು ತೋರಿಸಿದ್ದಾಗ ಅವರು ಶಾಕ್ಗೊಳಗಾಗಿದ್ದರು. ಈಗ ಅವುಗಳ ಪ್ರತಿರೂಪ ಸೃಷ್ಟಿಸುವ ಸಾಮರ್ಥ್ಯ ನೋಡಿ ದಿಗ್ಭ್ರಮೆಗೊಳಗಾಗಿದ್ದಾರೆ.
ಇದು ನಂಬಲು ಆಸಾಧ್ಯವಾದರೂ ಸತ್ಯ. ಅಮೆರಿಕದ ಕೆಲವು ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಒಂದು ಪವಾಡ ಸೃಷ್ಟಿಸಿದ್ದಾರೆ. ಹೌದು ಮಾರಾಯ್ರೇ, ವರ್ಮೌಂಟ್ ವಿಶ್ವವಿದ್ಯಾಲಯ, ಟಫ್ಸ್ ವಿಶ್ವವಿದ್ಯಾಲಯ ಮತ್ತು ಬಯಾಲಾಜಿಕಲ್ಲಿ ಇನ್ಸ್ಪೈರ್ಡ್ ಇಂಜಿನೀಯರಿಂಗ್ ನ ವಿಸ್ ಇನ್ಸ್ಟಿಟ್ಯೂಟ್ ವಿಜ್ಞಾನಿಗಳು ತಮ್ಮಷ್ಟಕ್ಕೆ ತಾವೇ ತಮ್ಮ ಪ್ರತಿರೂಪಗಳನ್ನು ಸೃಷ್ಟಿಸಿಕೊಳ್ಳುವ ಜೀವಂತ ರೊಬೊಗಳನ್ನು ಸೃಷ್ಟಿಸಿದ್ದಾರೆ! ಈ ಹಿಂದೆ ಇದೇ ವಿಜ್ಞಾನಿಗಳ ತಂಡ ಜಿನೋಬಾಟ್ಸ್ ಎಂದು ಕರೆಸಿಕೊಂಡಿದ್ದ ವಿಶ್ವದ ಪ್ರಪ್ರಥಮ ಜೀವಂತ ರೊಬೊವನ್ನು ಸೃಷ್ಟಿಸಿದ್ದರು. ಈಗ ಇದೇ ಜಿನೋಬಾಟ್ಸ್ ಏಕಾಂಗಿ ಸೆಲ್ಗಳನ್ನು ಪತ್ತೆ ಮಾಡಿಕೊಂಡು, ಇಲ್ಲವೇ ನೂರಾರು ಸೆಲ್ಗಳನ್ನು ಶೇಖರಿಸಿಕೊಂಡು, ತಮ್ಮದೇ ಪ್ರತಿರೂಪವನ್ನು ತಮ್ಮ ಬಾಯಲ್ಲಿ ಸೃಷ್ಟಿಸಿಕೊಳ್ಳಬಲ್ಲವು. ಭ್ರೂಣದಂಥ ಈ ಸೆಲ್ ಗಳು ಚರ್ಮವಾಗಿ ಅಭಿವೃದ್ಧಿ ಹೊಂದುತ್ತವೆ.
ಕಪ್ಪೆಯೊಂದರ ಜಿನೋಮ್ ಉಪಯೋಗಿಸಿ ಲ್ಯಾಬೊಂದರಲ್ಲಿ ಈ ಸೆಲ್ಗಳನ್ನು ವಿನ್ಯಾಸಗೊಳಿಸಲಾಗಿತ್ತು.
‘ಜೀವವನ್ನು ಮರುಸೃಷ್ಟಿಸುವ ಅಥವಾ ಪ್ರತಿರೂಪವನ್ನು ತಯಾರಿಸುವ ಎಲ್ಲಾ ವಿಧಾನಗಳಲ್ಲಿ ನಾವು ಕೆಲಸ ಮಾಡಿದ್ದೇವೆ ಎಂದು ಜನರು ಬಹಳ ದಿನಗಳಿಂದ ಯೋಚಿಸುತ್ತಿದ್ದಾರೆ. ಆದರೆ ಇದು ಹಿಂದೆ ಯಾವತ್ತೂ ಗಮನಿಸದ ಸಂಗತಿಯಾಗಿದೆ’ ಎಂದು ಟಫ್ಟ್ಸ್‌ನ ಹಿರಿಯ ವಿಜ್ಞಾನಿ ಪಿಎಚ್‌ಡಿ ಸಹ-ಲೇಖಕ ಡೌಗ್ಲಾಸ್ ಬ್ಲಾಕಿಸ್ಟನ್ ಹೇಳಿದ್ದಾರೆ.
ಜಿನೋಬಾಟ್ಸ್ ಗಳನ್ನು ಹೇಗೆ ಸುಲಭವಾದ ಟಾಸ್ಕ್ಗಳನ್ನು ನಿಭಾಯಿಸಲು ವಿನ್ಯಾಸಗೊಳಿಸಬಹುದು ಅಂತ ವಿವರಿಸುವ ಪ್ರಯೋಗಗಳನ್ನು ವಿಜ್ಞಾನಿಗಳಿಗೆ ಈ ಮೊದಲು ತೋರಿಸಿದ್ದಾಗ ಅವರು ಶಾಕ್ಗೊಳಗಾಗಿದ್ದರು. ಈಗ ಅವುಗಳ ಪ್ರತಿರೂಪ ಸೃಷ್ಟಿಸುವ ಸಾಮರ್ಥ್ಯ ನೋಡಿ ದಿಗ್ಭ್ರಮೆಗೊಳಗಾಗಿದ್ದಾರೆ.
ವಿಜ್ಞಾನಿಗಳು ಕಪ್ಪೆ ಭ್ರೂಣಗಳಿಂದ ಜೀವಂತ ಕಾಂಡಕೋಶಗಳನ್ನು ಕೊರೆದು ಜಿನೋಬೋಟ್‌ಗಳನ್ನು ರಚಿಸಿದ ನಂತರ ಅವುಗಳನ್ನು ಕಾವುಕೊಡಲು ಬಿಟ್ಟಿದ್ದಾರೆ. ಅದಾದ ನಂತರ, ಜೀವಕೋಶಗಳನ್ನು ಕತ್ತರಿಸಿ ನಿರ್ದಿಷ್ಟ ‘ದೇಹ ರೂಪಗಳಿಗೆ’ ಮರುರೂಪಿಸಿದ್ದಾರೆ.
ಇದನ್ನೂ ಓದಿ: Viral Video: ಹೇರ್ ಡ್ರೈಯರ್ ಬದಲು ಕುಕ್ಕರ್ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!