ಮಾಜಿ ಬಿಗ್ಬಾಸ್ (BiggBoss) ಸ್ಪರ್ಧಿ ಅಮೂಲ್ಯ ಗೌಡ (Amulya Gowda), ‘ಶ್ರೀಗೌರಿ’ ಹೆಸರಿನ ಹೊಸ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಬಿಗ್ಬಾಸ್ ಕನ್ನಡ ಸೀಸನ್ 10 ಮುಗಿದ ಬಳಿಕ ಅವರ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಧಾರಾವಾಹಿಯ ಪ್ರಚಾರ ಕಾರ್ಯದಲ್ಲಿ ಅಮೂಲ್ಯ ಬ್ಯುಸಿಯಾಗಿದ್ದಾರೆ. ಧಾರಾವಾಹಿಯ ಪ್ರಚಾರಕ್ಕೆಂದು ಬಿಗ್ಬಾಸ್ ಮನೆಗೂ ಸಹ ಅಮೂಲ್ಯ ಹೋಗಿದ್ದರು. ಸ್ಪರ್ಧಿಗಳನ್ನು ಮಾತನಾಡಿಸಿದ್ದರು. ಇದೀಗ ಟಿವಿ9 ಜೊತೆ ಮಾತನಾಡಿರುವ ಅಮೂಲ್ಯ ಗೌಡ, ಬಿಗ್ಬಾಸ್ ಕನ್ನಡ ಸೀಸನ್ 10ರ ಈ ಬಾರಿಯ ವಿನ್ನರ್ ಯಾರಾಗಬಹುದು? ಅಥವಾ ತಮಗೆ ಯಾರು ಗೆದ್ದರೆ ಖುಷಿ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ