Terracotta figurines: ಯುಪಿ ಗೋರಖ್ಪುರ್ ಜೈಲುವಾಸಿಯೊಬ್ಬ ಜೈಲಲ್ಲೇ ಟೆರ್ರಾಕೋಟಾ ಪ್ರತಿಮೆಗಳನ್ನು ತಯಾರಿಸುತ್ತಿದ್ದಾನೆ!

Updated on: Apr 14, 2023 | 7:56 AM

ಜೈಲು ಅಧಿಕಾರಿಗಳು ಮಿಥುನ್ ತಯಾರಿಸಿರುವ ಕೃತಿಗಳನ್ನು ಮಾರಿ ಅದರಿಂದ ಸಂಗ್ರಹವವಾಗುವ ದುಡ್ಡನ್ನು ಕೈದಿಗಳ ಮತ್ತು ಅವರು ಕುಟುಂಬಗಳ ನೆರವಿಗೆ ಬಳಸಲು ನಿರ್ಧರಿಸಿದ್ದಾರೆ.

ಗೋರಖ್ಪುರ (ಉತ್ತರ ಪ್ರದೇಶ):  ಕೊಲೆ ಅಪರಾಧದಲ್ಲಿ ಉತ್ತರ ಪ್ರದೇಶದ ಗೋರಖ್ಪುರ ಜೈಲಿನಲ್ಲಿ (Gorakhpur jail) ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಿಥುನ್ (Mithun) ಅಲ್ಲೇ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೌತಮ ಬುದ್ದ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಇತರ ಕೆಲವರ ಟೆರ್ರಾಕೋಟಾ ( ಜೇಡಿಮಣ್ಣನ್ನು ಬೇಯಿಸಿ ಪ್ರತಿಮೆಗಳನ್ನು ತಯಾರಿಸುವುದು) (terracotta) ಪ್ರತಿಮೆಗಳನ್ನು ತಯಾರಿಸಿದ್ದಾನೆ.

‘ನಮ್ಮ ಜೈಲಿನಲ್ಲಿ ಮಿಥುನ್ ಹೆಸರಿನ ಕೈದಿಯೊಬ್ಬ ಟೆರ್ರಾಕೋಟಾದಲ್ಲಿ ಅದ್ಭುತವಾದ ಕೆಲಸ ಮಾಡುತ್ತಿದ್ದಾನೆ. ಬೇರೆ ಕೆಲ ಆಸಕ್ತ ಕೈದಿಗಳು ಅವನಿಂದ ಟೆರ್ರಾಕೋಟಾ ಪ್ರತಿಮೆ ಮಾಡುವುದನ್ನು ಕಲಿಯುತ್ತಿದ್ದಾರೆ. ಟೆರ್ರಾಕೋಟಾ ಕಲೆಯಲ್ಲಿ ಮಿಥುನ್ ಪರಿಣಿತ ಅನ್ನೋದು ನಿರ್ವಿವಾದಿತ. ಜೈಲು ಗೋಡೆಗಳ ಮೇಲೆ ಅವನು ಗೋರಖ್ ನಾಥ್ ದೇವಸ್ಥಾನ ಮತ್ತು ಕಾಶಿ ವಿಶ್ವನಾಥ ಮಂದಿರದ ವರ್ಣಚಿತ್ರಗಳನ್ನು ರಚಿಸಿದ್ದಾನೆ,’ ಎಂದು ಗೋರಖ್ಪುರ ಜೈಲಿನ ಜೇಲರ್ ಅರುಣ್ ಖುಶ್ವಹಾ ಹೇಳುತ್ತಾರೆ.

ಜೈಲು ಅಧಿಕಾರಿಗಳು ಮಿಥುನ್ ತಯಾರಿಸಿರುವ ಕೃತಿಗಳನ್ನು ಮಾರಿ ಅದರಿಂದ ಸಂಗ್ರಹವವಾಗುವ ದುಡ್ಡನ್ನು ಕೈದಿಗಳ ಮತ್ತು ಅವರು ಕುಟುಂಬಗಳ ನೆರವಿಗೆ ಬಳಸಲು ನಿರ್ಧರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More