ಸೌಜನ್ಯ ಪ್ರಕರಣದಲ್ಲಿ ಅಮಾಯಕನನ್ನು ಜೈಲಲ್ಲಿ ಕೊಳೆಸಲಾಗಿದೆ, ಮರುತನಿಖೆಯಾಗಬೇಕು: ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

ಸೌಜನ್ಯ ಪ್ರಕರಣದಲ್ಲಿ ಅಮಾಯಕನನ್ನು ಜೈಲಲ್ಲಿ ಕೊಳೆಸಲಾಗಿದೆ, ಮರುತನಿಖೆಯಾಗಬೇಕು: ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 01, 2023 | 7:15 PM

ಒಬ್ಬ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿ ಸೌಜನ್ಯ ಮತ್ತು ಇತರ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಮೈಸೂರು: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik), ಸೌಜನ್ಯ ಹತ್ಯೆ ಪ್ರಕರಣದಲ್ಲಿ ಮರುತನಿಖೆಯಾಗಬೇಕಿದೆ (reinvestigation) ಎಂದು ಹೇಳಿದರು. ಆ ಪ್ರಕರಣ ಬಹಳ ಗಂಭೀರ ಸ್ವರೂಪದ್ದು, ಸಮಗ್ರ ತನಿಖೆಯಾಗಬೇಕಿದೆ, ಯಾವುದೋ ಅಮಾಯಕನನ್ನು (innocent) ಜೈಲಲ್ಲಿ 10 ವರ್ಷಗಳಿಂದ ಸೆರೆಮನೆಯಲ್ಲಿ ಕೊಳೆಸಲಾಗುತ್ತಿದೆ, ಸೌಜನ್ಯ ಮೇಲೆ ಅತ್ಯಾಚಾರವೆಸಗಿದವನು ಯಾರು, ಹತ್ಯೆ ಮಾಡಿದವನು ಯಾರು ಅನ್ನೋದು ಬಯಲಿಗೆ ಬರಬೇಕಿದೆ. ಇದೊಂದೇ ಅಲ್ಲ, ಇಂಥ 20-25 ಪ್ರಕರಣಗಳು ಆ ಭಾಗದಲ್ಲಿ ನಡೆದಿವೆ ಎಂದು ಮುತಾಲಿಕ್ ಹೇಳಿದರು. ಒಬ್ಬ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿ ಸೌಜನ್ಯ ಮತ್ತು ಇತರ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ