ನಾನು ಕೋಟ್ಯಧಿಪತಿ ಅಲ್ಲ, ಐಟಿ ಕಂಪನಿ ಕೆಲಸ ಮಾಡ್ತೀನಿ: ಅನುಶ್ರೀ ಪತಿ ಸ್ಪಷ್ಟನೆ

Updated on: Aug 28, 2025 | 3:42 PM

ಆ್ಯಂಕರ್ ಅನುಶ್ರೀ ಅವರನ್ನು ಮದುವೆ ಆಗಿರುವ ರೋಷನ್ ರಾಮಮೂರ್ತಿ ಬಗ್ಗೆ ಕೆಲವು ಗಾಸಿಪ್ ಹಬ್ಬಿತ್ತು. ಅವರು ನೂರಾರು ಕೋಟಿ ರೂಪಾಯಿ ಒಡೆಯ ಎಂದು ಕೆಲವೆಡೆ ಸುದ್ದಿ ಹಬ್ಬಿತ್ತು. ಆ ಬಗ್ಗೆ ರೋಷನ್ ಅವರು ಸ್ಪಷ್ಟನೆ ನೀಡಿದರು. ‘ನಾನು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ನಾನು ಕೋಟ್ಯಧಿಪತಿ ಅಲ್ಲ’ ಎಂದು ರೋಷನ್ ಹೇಳಿದರು.

ನಿರೂಪಕಿ ಅನುಶ್ರೀ (Anchor Anushree) ಅವರನ್ನು ಮದುವೆ ಆಗಿರುವ ರೋಷನ್ ರಾಮಮೂರ್ತಿ ಅವರ ಬಗ್ಗೆ ಒಂದಷ್ಟು ಗಾಸಿಪ್ ಹಬ್ಬಿತ್ತು. ಅವರು ನೂರಾರು ಕೋಟಿ ರೂಪಾಯಿ ಒಡೆಯ ಎಂದು ಕೆಲವು ಕಡೆ ಸುದ್ದಿ ಆಗಿತ್ತು. ಆ ಬಗ್ಗೆ ಮದುವೆ ಮುಗಿದ ಕೂಡಲೇ ರೋಷನ್ (Anushree Husband Roshan) ಅವರು ಸ್ಪಷ್ಟನೆ ನೀಡಿದರು. ‘ನಾನು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ನಾನು ಕೋಟ್ಯಧಿಪತಿ ಅಲ್ಲ’ ಎಂದು ರೋಷನ್ ಹೇಳಿದರು. ‘ಅವರು ಕೋಟ್ಯಧಿಪತಿ ಅಲ್ಲ. ಹೃದಯವಂತಿಕೆಯಲ್ಲಿ ಕೋಟ್ಯಧಿಪತಿ’ ಎಂದು ಅನುಶ್ರೀ ಅವರು ಹೇಳಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More