AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರ ಮಾಂಗಲ್ಯ ಆಗುವ ಆಸೆ ಹೊಂದಿದ್ದ ಅನುಶ್ರೀ: ಆದರೆ ಸಾಧ್ಯವಾಗಲಿಲ್ಲ ಯಾಕೆ?

ಮಂತ್ರ ಮಾಂಗಲ್ಯ ಆಗುವ ಆಸೆ ಹೊಂದಿದ್ದ ಅನುಶ್ರೀ: ಆದರೆ ಸಾಧ್ಯವಾಗಲಿಲ್ಲ ಯಾಕೆ?

ಮದನ್​ ಕುಮಾರ್​
|

Updated on:Aug 28, 2025 | 5:02 PM

Share

ಕುಟುಂಬದವರು, ಸ್ನೇಹಿತರು ಮತ್ತು ಆಪ್ತರ ಸಮ್ಮುಖದಲ್ಲಿ ಆ್ಯಂಕರ್ ಅನುಶ್ರೀ ಅವರ ಮದುವೆ ನಡೆದಿದೆ. ಅವರಿಗೆ ಮಂತ್ರ ಮಾಂಗಲ್ಯ ಆಗಬೇಕು ಎಂಬ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅನುಶ್ರೀ ಅವರು ವಿವರಿಸಿದ್ದಾರೆ. ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಮದುವೆ ಆಗಿದ್ದಾರೆ.

ಕುಟುಂಬದವರು, ಸ್ನೇಹಿತರು ಮತ್ತು ಆಪ್ತರ ಸಮ್ಮುಖದಲ್ಲಿ ಆ್ಯಂಕರ್ ಅನುಶ್ರೀ (Anchor Anushree) ಅವರ ಮದುವೆ ನಡೆದಿದೆ. ಅವರಿಗೆ ಮಂತ್ರ ಮಾಂಗಲ್ಯ (Mantra Mangalya) ಆಗಬೇಕು ಎಂಬ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅನುಶ್ರೀ ಅವರು ವಿವರಿಸಿದ್ದಾರೆ. ‘ಮಂತ್ರ ಮಾಂಗಲ್ಯಕ್ಕೆ ನಾವು ಜಾಗವನ್ನೆಲ್ಲ ನೋಡಿಕೊಂಡು ಬಂದಿದ್ದೆವು. ಆದರೆ ಇಂತಿಷ್ಟೇ ಜನರ ಒಳಗೆ ಮದುವೆ ಮಾಡಬೇಕು ಎಂಬ ಕೆಲವು ನಿಯಮಗಳು ಇವೆ. ನಮ್ಮ ಕುಟುಂಬದವರನ್ನು ಸೇರಿಸಿದಾಗ ಸ್ವಲ್ಪ ಜನ ಜಾಸ್ತಿ ಆಗುತ್ತಾರೆ. ಹಾಗಾಗಿ ಮಂತ್ರ ಮಾಂಗಲ್ಯದ ನಿಯಮ ಉಲ್ಲಂಘನೆ ಮಾಡಲು ನಮಗೆ ಇಷ್ಟ ಇರಲಿಲ್ಲ’ ಎಂದು ಅನುಶ್ರೀ ಅವರು ಹೇಳಿದ್ದಾರೆ. ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಮದುವೆ (Anushree Wedding) ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 28, 2025 04:24 PM