ವರುಣ್ ಅಣ್ಣ ಮದುವೆಯ ಎಲ್ಲ ಕಾರ್ಯಗಳನ್ನು ಮುಂದೆ ನಿಂತು ನೆರವೇರಿಸಿದ್ದಾರೆ: ಅನುಶ್ರೀ
ಸಿನಿಮಾ ರಂಗದ ಸೆಲಿಬ್ರಿಟಿಗಳು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿದ್ದರೂ ಕೆಲಸಗಳನ್ನು ಬದಿಗೊತ್ತಿ ಇಲ್ಲಿಯವರೆಗೆ ಬಂದು ತಮ್ಮನ್ನು ಹರಸಿದ್ದಾರೆ, ಹಂಸಲೇಖ ಸರ್, ಅರ್ಜುನ್ ಸರ್, ತರುಣ್ ಸುಧೀರ್, ತಾರಾ ಅಮ್ಮ, ಜಗ್ಗೇಶ್ ಸರ್, ಪ್ರೇಮ್ ಮಾಮ, ಮೊದಲಾದವರೆಲ್ಲ ಆಗಮಿಸಿ ತಮ್ಮನ್ನು ಬ್ಲೆಸ್ ಮಾಡಿದ್ದಾರೆ, ಅಪ್ಪು ಸರ್ ದೈಹಿಕವಾಗಿ ನಮ್ಮೊಂದಿಗಿರದಿದ್ದರೂ ಅವರ ಪ್ರಸೆನ್ಸ್ ಅನ್ನು ಫೀಲ್ ಮಾಡುತ್ತೇನೆ ಎಂದು ಅನುಶ್ರೀ ಹೇಳಿದರು.
ಬೆಂಗಳೂರು, ಆಗಸ್ಟ್ 28: ಪುನೀತ್ ರಾಜ್ಕುಮಾರ್ ಅವರ ಅನುಪಸ್ಥತಿಯಲ್ಲಿ ಸಹೋದರನಂತಿರುವ ವರುಣ್ (Varun) ಅವರು ಮುಂದೆ ನಿಂತು ಮದುವೆಯ ಎಲ್ಲ ಕೆಲಸಗಳನ್ನು ಮಾಡಿದ್ದಾರೆ, ಅವರಿಗೆ ನಾನು ಚಿರಋಣಿಯಾಗಿದ್ದೇನೆ, ಎಲ್ಲ ಸುಖ ಸಂತೋಷಗಳನ್ನು ಅವರು ಒಂದು ತಟ್ಟೆಯಲ್ಲಿ ಹಾಕಿ ನನಗೆ ನೀಡಿದ್ದಾರೆ, ಮಾಧ್ಯಮಗಳ ಮೂಲಕ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಹೇಳುತ್ತೇನೆ ಎಂದು ನವವಧು ಅನುಶ್ರೀ ಹೇಳಿದರು. ಮದುವೆಗೆ ಆಗಮಿಸಿ ತಮ್ಮನ್ನು ಹರಿಸಿದ ಶಿವಣ್ಣ ಮತ್ತು ಗೀತಕ್ಕಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜನಪ್ರಿಯ ನಿರೂಪಕಿ ಹೇಳಿದರು.
ಇದನ್ನೂ ಓದಿ: ಅನುಶ್ರೀ, ರೋಷನ್ ಮದುವೆ: ಲವ್ ಸ್ಟೋರಿ ಬಗ್ಗೆ ಮೊದಲ ಬಾರಿ ಮಾತಾಡಿದ ಜೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Aug 28, 2025 05:28 PM
Latest Videos

