ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ತೆಲಂಗಾಣದ ಹನುಮಕೊಂಡದಲ್ಲಿ ಶಿವನ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಉತ್ಖನನದ ವೇಳೆ ಬಾಲ ಹನುಮಾನ್ ವಿಗ್ರಹ ಪತ್ತೆಯಾಗಿದೆ. ಇದರೊಂದಿಗೆ ಸ್ಥಳೀಯರು ಸೇರಿ ಹನುಮಂತನ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿದರು.
ಹೈದರಾಬಾದ್: ತೆಲಂಗಾಣದ ಹನುಮಕೊಂಡ ಹಂಟರ್ ರಸ್ತೆಯಲ್ಲಿ ಉತ್ಖನನದ ವೇಳೆ ಬಾಲ ಹನುಮಂತನ ಪ್ರಾಚೀನ ವಿಗ್ರಹ ಪತ್ತೆಯಾಗಿದೆ. ಶಿವ ದೇವಾಲಯದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹನುಮಾನ್ ಮೂರ್ತಿ ಪತ್ತೆಯಾದ ನಂತರ ಸ್ಥಳೀಯರು ಸಂಭ್ರಮದಲ್ಲಿ ಮುಳುಗಿದ್ದಾರೆ. ಅಲ್ಲಿ ಈ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಸದ್ಯದಲ್ಲೇ ಬಾಲ ಹನುಮಂತನಿಗೆ ಮಂದಿರ ನಿರ್ಮಿಸಲಾಗುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos