Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಡಿ ದಾಳಿ ಮಾಡಿದ್ದು ಮುಡಾ ಕಚೇರಿ ಮೇಲೆ, ಸಿಎಂ ಮನೆ ಮೇಲಲ್ಲ: ಸತೀಶ್ ಜಾರಕಿಹೊಳಿ

ಈಡಿ ದಾಳಿ ಮಾಡಿದ್ದು ಮುಡಾ ಕಚೇರಿ ಮೇಲೆ, ಸಿಎಂ ಮನೆ ಮೇಲಲ್ಲ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 19, 2024 | 7:09 PM

ಮುಡಾ ಹಗರಣ ಹಣದ ಅವ್ಯವಹಾರಕ್ಕೆ ಸಂಬಂಧಿಸಿದ ವಿಷಯವಲ್ಲದಿದ್ದರೂ ಜಾರಿ ನಿರ್ದೇಶನಾಲಯ ದಾಳಿ ನಡೆಸಿರುವ ಔಚಿತ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಆದೇ ಸಂಗತಿಯನ್ನು ಎಲ್ಲರೂ ಕೇಳುತ್ತಿದ್ದಾರೆ ಮತ್ತು ಸುಪ್ರೀಂ ಕೋರ್ಟ್​​​​ಗೆ ಮನವಿ ಸಲ್ಲಿಸಿ ಈಡಿ ವ್ಯಾಪ್ತಿಯನ್ನು ಪ್ರಶ್ನಿಸಿದ್ದಾರೆ ಎಂದು ಹೇಳಿದರು.

ಬೆಳಗಾವಿ: ಮುಡಾ ಕಚೇರಿ ಮೇಲೆ ಈಡಿ ಅಧಿಕಾರಿಗಳು ಮಾಡಿರುವ ದಾಳಿ ಮತ್ತು ಸರ್ಕಾರದ ನಡುವೆ ಯಾವುದೇ ಸಂಬಂಧವಿಲ್ಲ, ಅವರು ಕಚೇರಿಯ ಮೇಲೆ ದಾಳಿ ಮಾಡಿದ್ದಾರೆಯೇ ಹೊರತು ಸಿದ್ದರಾಮಯ್ಯ ಮನೆ ಮೇಲೆ ಅಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಮಾಧ್ಯಮಗಳ ಜೊತೆ ಮಾತಾಡಿದ ಸಚಿವ, ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಸುರೇಶ್ ಚಾಪರ್​​ನಲ್ಲಿ ಬಂದು ಮುಖ್ಯವಾದ ಕಡತಗಳನ್ನು ಹೊತ್ತೊಯ್ದಿದ್ದಾರೆ ಅಂತ ಕುಮಾರಸ್ವಾಮಿ ಮಾಡಿರೋದು ಆಪಾದನೆ, ಅದು ಪ್ರೂವ್ ಆಗಬೇಕಿದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಕಚೇರಿ ಮೇಲೆ ಈಡಿ ದಾಳಿ ನಡೆಸಿದ್ದು ನನಗೆ ಸಂಬಂಧಿಸದ ವಿಷಯ: ಭೈರತಿ ಸುರೇಶ್