ಮುಡಾ ಕಚೇರಿ ಮೇಲೆ ಈಡಿ ದಾಳಿ ನಡೆಸಿದ್ದು ನನಗೆ ಸಂಬಂಧಿಸದ ವಿಷಯ: ಭೈರತಿ ಸುರೇಶ್
ಈಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದು ತನಗೆ ಸಂಬಂಧಿಸದ ವಿಷಯ, ಅವರು ಕೇಳುವ ದಾಖಲೆಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ ಎಂದು ಸಚಿವ ಬೈರತಿ ಸುರೇಶ್ ಹೇಳಿದರು. ಮುಡಾ ಕಚೇರಿ ಮೇಲೆ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದು ವಿಷಯವೇ ಅಲ್ಲ ಎನ್ನುವಂತೆ ಅವರು ಮಾತಾಡಿದರು.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದನ್ನು ರೇಡ್ ಎಂದು ಒಪ್ಪಿಕೊಳ್ಳಲು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಯಾರಿಲ್ಲ. ಸರ್ಕಾರಿ ಕಚೇರಿ ಮತ್ತು ಅಧಿಕಾರಿಗಳನ್ನು ತಪಾಸಣೆ ಮಾಡುವ ಅಧಿಕಾರ ಈಡಿ, ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳಿಗಿರುತ್ತದೆ, ಈಡಿ ನಡೆಸಿರೋದು ದಾಳಿಯಲ್ಲ, ಅವರಿಗೆ ಕೆಲವು ದಾಖಲೆ ಪತ್ರಗಳು ಬೇಕಿದ್ದವು ಅವುಗಳನ್ನು ಪಡೆಯಲು ಹೋಗಿದ್ದಾರೆ ಎಂದು ಸುರೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಲಿಕಾಪ್ಟರ್ನಲ್ಲಿ ಅವಸರದಿಂದ ಬಂದ ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಹೊತ್ತೊಯ್ದರು? ಕುಮಾರಸ್ವಾಮಿ
Latest Videos