ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ದರ್ಶನ್ ತೂಗುದೀಪ ಜೈಲು ಸೇರಿ ನಾಲ್ಕು ತಿಂಗಳಾಯ್ತು, ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿ 50 ದಿನಗಳಾಯ್ತು. ಈವರೆಗೆ ದರ್ಶನ್ಗೆ ಜಾಮೀನು ದೊರಕಿಲ್ಲ. ಜಾಮೀನು ಅರ್ಜಿ ವಜಾ ಆದ ಬಳಿಕ ಮೊದಲ ಬಾರಿಗೆ ಪತ್ನಿ ಹಾಗೂ ಸಹೋದರ ದಿನಕರ್ ದರ್ಶನ್ ಕಾಣಲು ಬಂದಿದ್ದರು. ಈ ವೇಳೆ ಬೇಸರದಿಂದಲೇ ಬಂದರು ದರ್ಶನ್.
ದರ್ಶನ್ ಜೈಲು ಸೇರಿ ನಾಲ್ಕು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡು 50 ದಿನಗಳಾಗಿವೆ. ಆದರೆ ಈ ವರೆಗೆ ಜಾಮೀನು ಲಭಿಸಿಲ್ಲ. ಸಿಸಿಎಚ್ ನ್ಯಾಯಾಲಯ ದರ್ಶನ್ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದೆ. ಇದೀಗ ದರ್ಶನ್ ಹೈಕೋರ್ಟ್ಗೆ ಅರ್ಜಿ ಹಾಕಿದ್ದಾರಾದರೂ ಅಲ್ಲಿಯೂ ಸಹ ಜಾಮೀನು ಸಿಗುವ ನಿರೀಕ್ಷೆ ಇಲ್ಲ. ಹೈಕೋರ್ಟ್ನಲ್ಲಿ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಜಾಮೀನು ಅರ್ಜಿ ವಜಾ ಆದ ಬಳಿಕ ಮೊದಲ ಬಾರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೈಲಿಗೆ ಆಗಮಿಸಿದ್ದರು. ಈ ವೇಳೆ ತುಸು ಬೇಸರದಲ್ಲಿಯೇ ದರ್ಶನ್ ಆಗಮಿಸಿದರು. ಅವರು ಎರಡು ಚೀಲದಲ್ಲಿ ತಂದಿದ್ದ ಬಟ್ಟೆ, ಡ್ರೈಫ್ರೂಟ್ಸ್ ಇನ್ನಿತರೆಗಳನ್ನು ಎತ್ತಿಕೊಂಡು ತಮ್ಮ ಬ್ಯಾರಕ್ಗೆ ಹೋದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು

