ಹೆಲಿಕಾಪ್ಟರ್​ನಲ್ಲಿ ಅವಸರದಿಂದ ಬಂದ ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಹೊತ್ತೊಯ್ದರು? ಕುಮಾರಸ್ವಾಮಿ

ಮುಡಾದಿಂದಲೇ ತಪ್ಪು ನಡೆದಿರೋದು, ಹಾಗಾಗಿ ತನಗೆ ಆ 14 ಸೈಟುಗಳು ಬೇಡ, ಅದರ ಬದಲಿಗೆ ₹ 62 ಕೋಟಿ ಕೊಡಲಿ ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಗೇಲಿ ಮಾಡಿದರು. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಕೇಂದ್ರಿತ ಮುಡಾ ಹಗರಣ ಮತ್ತಷ್ಟು ಕಾವು ಪಡೆದುಕೊಳ್ಳಲಿರುವುದಂತೂ ನಿಶ್ಚಿತ. ವಿಧಾನಸಭಾ ಅಧಿವೇಶನದಲ್ಲಿ ಇದು ಪ್ರಮುಖ ಚರ್ಚೆಯ ವಿಷಯವಾಗಲಿದೆ.

ಹೆಲಿಕಾಪ್ಟರ್​ನಲ್ಲಿ ಅವಸರದಿಂದ ಬಂದ ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಹೊತ್ತೊಯ್ದರು? ಕುಮಾರಸ್ವಾಮಿ
|

Updated on: Jul 06, 2024 | 6:19 PM

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ರಾಜ್ಯದ ಜನರ ಗಮನವೆಲ್ಲ ಮುಡಾ ಹಗರಣದತ್ತ ಹರಿಯುವಂತೆ ಮಾಡಿರುವ ಪ್ರಯತ್ನ ಯಶ ಕಂಡಿದೆ ಎಂದರು. ನಿನ್ನೆ ಚಾಮರಾಜನಗರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಡಾ ಸೈಟು ಹಂಚಿಕೆ ಸಂಬಂಂಧಿಸಿದಂತೆ ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿ ನನ್ನ ಹೆಸರನ್ನು ಉಲ್ಲೇಖಿಸುತ್ತಾ ಸಿಎಂ ಕುರ್ಚಿಗಾಗಿ ಟವೆಲ್ ಹಾಕಿರುವವರು ಮುಡಾ ಹಗರಣ ಬೆಳಕಿಗೆ ತಂದಿದ್ದಾರೆಅ ಂತ ಹೇಳಿರುವುದೆಲ್ಲ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದರು. ಹಗರಣವೇ ನಡೆದಿಲ್ಲ ಅಂತಾದ್ರೆ ತನಿಖೆ ಯಾವ ಕಾರಣಕ್ಕಾಗಿ ನಡೆಸಲಾಗುತ್ತಿದೆ? ಧಾವಂತದಿಂದ ಹೆಲಿಕಾಪ್ಟರ್​​ನಲ್ಲಿ ಬಂದು ಯಾವ್ಯಾವ ದಾಖಲಾತಿಗಳನ್ನು ಅವರು ತುಂಬಿಕೊಂಡು ಹೋಗಿದ್ದಾರೆ? ಹಿಂದೆ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕೆಂಪಣ್ಣ ಆಯೋಗದ ವರದಿಯನ್ನು ಏನು ಮಾಡಿದರು ಅಂತ ಯಾರಿಗೂ ಗೊತ್ತಾಗಲಿಲ್ಲ ಎಂದು ಹೇಳಿದ ಕುಮಾರಸ್ವಾಮಿ ಈ ಹಗರಣವನ್ನು ಎಲ್ಲಿಗೆ ಮುಟ್ಟಿಸಲಿದ್ದಾರೆ ಅನ್ನೋದು ಸಹ ಗೊತ್ತಾಗುತ್ತಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮಂಡ್ಯದಲ್ಲಿ ಜನತಾ ದರ್ಶನ ಪಾಲಿಟಿಕ್ಸ್; ಹೆಚ್​ಡಿ ಕುಮಾರಸ್ವಾಮಿ ಬೆನ್ನಲ್ಲೇ ಇಂದು ಸಚಿವ ಎನ್. ಚಲುವರಾಯಸ್ವಾಮಿಯವರಿಂದ ಜನತಾ ದರ್ಶನ

Follow us