ನಾನು ಮಂಡ್ಯಕ್ಕೆ ಹೋಗದಿದ್ದರೆ ಲೂಟಿ ಹೊಡೆಯುವ ಕೆಲಸಕ್ಕೆ ಅಡ್ಡಿಯಿರಲ್ಲವೆಂದು ಚಲುವರಾಯಸ್ವಾಮಿ ಭಾವಿಸಿರಬಹುದು: ಕುಮಾರಸ್ವಾಮಿ

ನಾನು ಮಂಡ್ಯಕ್ಕೆ ಹೋಗದಿದ್ದರೆ ಲೂಟಿ ಹೊಡೆಯುವ ಕೆಲಸಕ್ಕೆ ಅಡ್ಡಿಯಿರಲ್ಲವೆಂದು ಚಲುವರಾಯಸ್ವಾಮಿ ಭಾವಿಸಿರಬಹುದು: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 06, 2024 | 8:04 PM

ಚಲುವರಾಯಸ್ವಾಮಿ ಕಳೆದೊಂದು ವರ್ಷದಲ್ಲಿ ಯಾವ ಕೆಲಸವನ್ನೂ ಮಾಡಿರದ ಕಾರಣ ಶುಕ್ರವಾರ ತಾನು ನಡೆಸಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ 3,000 ಜನ ತಮಗೆ ಅರ್ಜಿಗಳನ್ನು ನೀಡಿದ್ದಾರೆ, ತಾನು ಮಂಡ್ಯಕ್ಕೆ ಬರದೆ ದೆಹಲ್ಲಿಯಲ್ಲೇ ಕೂತು ಬಿಟ್ಟರೆ ತಮ್ಮ ಲೂಟಿ ಹೊಡೆಯುವ ಕೆಲಸ ಸುಗಮವಾಗಿ ನಡೆಯಬಹುದು ಅಂತ ಅವರು ಭಾವಿಸಿರಬಹುದು ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಒಂದು ಜಮಾನಾದಲ್ಲಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಎನ್ ಚಲುವರಾಯಸ್ವಾಮಿ ಗಳಸ್ಯ ಕಂಠಸ್ಯ, ಆದರೆ ಚಲುವಣ್ಣ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಬಳಿಕ ಅವರ ನಡುವೆ ಎಣ್ಣೆ ಸೀಗೇಕಾಯಿ ಸಂಬಂಧ! ಅದು ಬಿಡಿ ವಿಷಯಕ್ಕೆ ಬರೋಣ; ನಿನ್ನೆ ಮಂಡ್ಯದಲ್ಲಿ ಕುಮಾರಸ್ವಾಮಿ ಜನತಾ ದರ್ಶನ ನಡೆಸಿದ್ದು ಸಿದ್ದರಾಮಯ್ಯ ಸರ್ಕಾರದ ಪ್ರತಿನಿಧಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇವತ್ತು ತಾನೂ ಸಹ ಜನತಾ ದರ್ಶನ ಕಾರ್ಯಕ್ರಮ ನಡೆಸಿದ ಕೃಷಿ ಸಚಿವ ಚಲುವರಾಯಸ್ವಾಮಿ, ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿಯವರು ಕೇವಲ ಮಂಡ್ಯಕ್ಕೆ ಮಾತ್ರ ಸಚಿವರಲ್ಲ, ಇಡೀ ಭಾರತಕ್ಕೆ ಸಚಿವರು ಎಂದಿದ್ದಾರೆ. ಅದಕ್ಕೆ ಇಂದು ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ತಾನು ಮಂಡ್ಯದ ಸಂಸದ, ಅಲ್ಲಿಗೆ ಹೋಗಲು ಚಲುವರಾಯಸ್ವಾಮಿಯ ಅಪ್ಪಣೆ ತೆಗೆದುಕೊಳ್ಳಬೇಕಿಲ್ಲ ಎಂದು ಹೇಳಿದರು. ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನನ್ನ ಮೇಲೆ ವಿಶ್ವಾಸವನ್ನಿಟ್ಟು ಒಂದು ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ, ಅದರ ಜೊತೆಗೆ ನನ್ನನ್ನು ಮಂಡ್ಯದಿಂದ ಲೋಕಸಭೆಗೆ ಕಳಿಸಿರುವ ಜನರ ಕಷ್ಟಸುಖ ಕೇಳುವುದು ಸಹ ನನ್ನ ಕರ್ತವ್ಯವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಲಿಕಾಪ್ಟರ್​ನಲ್ಲಿ ಅವಸರದಿಂದ ಬಂದ ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಹೊತ್ತೊಯ್ದರು? ಕುಮಾರಸ್ವಾಮಿ