ಡಿಕೆ ಶಿವಕುಮಾರ್​ರನ್ನು ಅವರ ಮನೆಯಲ್ಲಿ ಭೇಟಿಯಾದ ಬಿಕೆಯು ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್

ಐವತ್ತೈದು ವರ್ಷ ವಯಸ್ಸಿನ ರಾಕೇಶ್ ಟಿಕಾಯತ್ ಅವರ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಸಹ ಭಾರತದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು. ಬಹುಜನ ಕಿಸಾನ್ ದಳ್ ಪಕ್ಷದ ಸಂಸ್ಥಾಪಕರಾಗಿದ್ದ ಮಹೇಂದ್ರ ಟಿಕಾಯತ್ ಅವರೇ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯನ್ನೂ ಹುಟ್ಟುಹಾಕಿದ್ದರು.

ಡಿಕೆ ಶಿವಕುಮಾರ್​ರನ್ನು ಅವರ ಮನೆಯಲ್ಲಿ ಭೇಟಿಯಾದ ಬಿಕೆಯು ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್
|

Updated on: Jul 06, 2024 | 5:25 PM

ಬೆಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಇಂದು ಒಬ್ಬ ಅನಿರೀಕ್ಷಿತ ಅತಿಥಿ ಆಗಮಿಸಿದರು. ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ರಾಷ್ಟ್ರೀಯ ವಕ್ತಾರ, ರೈತ ಹಕ್ಕುಗಳ ಪ್ರತಿಪಾದಕ ಮತ್ತು ಕಾರ್ಯಕರ್ತ ಹಾಗೂ ಭಾರತದ ಅಗ್ರಗಣ್ಯ ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಸದಾಶಿವನಗರದಲ್ಲಿರುವ ಉಪ ಮುಖ್ಯಮಂತ್ರಿಯವರ ನಿವಾಸಕ್ಕೆ ಒಂದು ನಿಯೋಗದೊಂದಿಗೆ ಆಗಮಿಸಿ ಮಾತುಕತೆ ನಡೆಸಿದರು. ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯು ಆಹಾರ ಸಾರ್ವಭೌತ್ವಕ್ಕೆ ಅಂತಾರಾಷ್ಟ್ರೀಯ ಯೋಜನಾ ಸಮಿತಿ ಸಮಾವೇಶವೊಂದನ್ನು ನಡೆಸಲಿದ್ದು ಆದರಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲು ರೈತ ಮುಖಂಡ ಬಂದಿದ್ದರಂತೆ. ಅವರೊಂದಿಗೆ ರಾಜ್ಯದ ಕೆಲ ರೈತ ಸಂಘಟನೆಗಳ ಮುಖಂಡರು ಸಹ ಶಿವಕುಮಾರ್ ನಿವಾಸಕ್ಕೆ ಬಂದಿದ್ದರು. ಟಿಕಾಯತ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗುವ ಉದ್ದೇಶವಿದೆಯಾ ಅನ್ನೋದು ಗೊತ್ತಾಗಲಿಲ್ಲ. ಯಾಕೆಂದರೆ, ಟಿಕಾಯತ್ ಅವರು ಶಿವಕುಮಾರ್ ಮನೆಯಲ್ಲಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಚ್ಚುವರಿ ಡಿಸಿಎಂ ಬಗ್ಗೆ ಮಾತನಾಡಿದ್ರೆ ನೋಟಿಸ್, ಬಾಯಿಗೆ ಬೀಗ ಹಾಕೊಂಡಿರಿ: ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ

Follow us