ಮಂಡ್ಯದಲ್ಲಿ ಜನತಾ ದರ್ಶನ ಪಾಲಿಟಿಕ್ಸ್; ಹೆಚ್​ಡಿ ಕುಮಾರಸ್ವಾಮಿ ಬೆನ್ನಲ್ಲೇ ಇಂದು ಸಚಿವ ಎನ್. ಚಲುವರಾಯಸ್ವಾಮಿಯವರಿಂದ ಜನತಾ ದರ್ಶನ

ಸಕ್ಕರೆ ನಾಡು ಮಂಡ್ಯದಲ್ಲಿ ಜನತಾ ದರ್ಶನ ಪಾಲಿಟಿಕ್ಸ್ ಶುರುವಾಗಿದೆ. ನಿನ್ನೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿಯವರು ಜನತಾ ದರ್ಶನ ಕಾರ್ಯಕ್ರಮ ನೆರವೇರಿಸಿದ್ದು ಇಂದು ಕಾಂಗ್ರೆಸ್ ಸಚಿವ ಎನ್. ಚಲುವರಾಯಸ್ವಾಮಿ ಅವರು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹನುಮ ಬಾವುಟ ವಿವಾದ ನಡೆದ ಗ್ರಾಮದಲ್ಲೇ ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ.

ಮಂಡ್ಯದಲ್ಲಿ ಜನತಾ ದರ್ಶನ ಪಾಲಿಟಿಕ್ಸ್; ಹೆಚ್​ಡಿ ಕುಮಾರಸ್ವಾಮಿ ಬೆನ್ನಲ್ಲೇ ಇಂದು ಸಚಿವ ಎನ್. ಚಲುವರಾಯಸ್ವಾಮಿಯವರಿಂದ ಜನತಾ ದರ್ಶನ
ಎನ್​ ಚಲುವರಾಯಸ್ವಾಮಿ
Follow us
ಪ್ರಶಾಂತ್​ ಬಿ.
| Updated By: ಆಯೇಷಾ ಬಾನು

Updated on: Jul 06, 2024 | 9:35 AM

ಮಂಡ್ಯ, ಜುಲೈ.06: ಮಂಡ್ಯದಲ್ಲಿ ಜನತಾ ದರ್ಶನ ಪಾಲಿಟಿಕ್ಸ್ ಶುರುವಾಗಿದೆ. ನಿನ್ನೆ ‌ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಜನತಾ ದರ್ಶನ ಕಾರ್ಯಕ್ರಮ ಮಾಡಿದ್ದರು. ಇಂದು ಸಚಿವ ಎನ್. ಚಲುವರಾಯಸ್ವಾಮಿ ( N.Chaluvarayaswamy) ಅವರು ಜನತಾ ದರ್ಶನ (Janata Darshana) ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಜನತಾ ದರ್ಶನ ಬೆನ್ನಲ್ಲೆ, ರಾಜ್ಯ ಸಚಿವ ಚಲುವರಾಯಸ್ವಾಮಿರಿಂದಲೂ ಜನತಾ ದರ್ಶನ ನಡೆಯಲಿದೆ.

ಹನುಮ ಧ್ಚಜ ವಿವಾದ ನಡೆದ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಂದಿನ‌ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸಲು ಕೈ ನಾಯಕರು ತಯಾರಿ ನಡೆಸಿದ್ದಾರೆ. ನಿನ್ನೆ ನಡೆದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ರಾಜ್ಯ ಸರ್ಕಾರ ಜಿಲ್ಲೆಯ ಅಧಿಕಾರಿ ವರ್ಗ ಕಳಿಸಿರಲಿಲ್ಲ. ಆದರೆ ಇಂದಿನ ಜನತಾ ದರ್ಶನಕ್ಕೆ 53 ಇಲಾಖೆಗಳ ಜಿಲ್ಲೆಯ ಅಧಿಕಾರಿಗಳು ಖುದ್ದು ಹಾಜರಿರಲು ಸೂಚನೆ ನೀಡಿದೆ. ಕುಮಾರಸ್ವಾಮಿ ಅವರಿಗೆ ಟಕ್ಕರ್ ಕೊಡಲು ಕೈ ನಾಯಕರು ಮುಂದಾಗಿದ್ದಾರೆ.

ಇದನ್ನೂ ಓದಿ:ಮಂಡ್ಯದಲ್ಲಿ ಜನತಾದರ್ಶನ: 7 ಗಂಟೆಗಳಲ್ಲಿ ಬಂದ ಅರ್ಜಿಗಳೆಷ್ಟು? ಕುಮಾರಸ್ವಾಮಿ ಹೇಳಿದ್ದೇನು?

ಸಚಿವ ಚಲುವರಾಯಸ್ವಾಮಿ ಬೆಳಿಗ್ಗೆ 10:30ಕ್ಕೆ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಂದಿನ ಜನತಾ ದರ್ಶನದಲ್ಲಿ ಡಿಸಿ ಸೇರಿ ಅಧಿಕಾರಿಗಳ ವರ್ಗ ಭಾಗಿಯಾಗಲಿದೆ. ವಿವಾದಿತ ಗ್ರಾಮ ಕೆರಗೋಡು ಗ್ರಾಮಕ್ಕೆ ಹೊಸ ರೂಪಕೊಡಲು ಕೈ ನಾಯಕರು ತಂತ್ರ ಹೆಣೆದಿದ್ದಾರೆ. ಹನುಮಧ್ವಜ ತೆರವಿನಿಂದ ಖ್ಯಾತಿಗೊಂಡಿರೊ ಕೆರಗೋಡು ಗ್ರಾಮದಲ್ಲಿ ಅಭಿವೃದ್ಧಿ ಪರ್ವದ ಮೂಲಕ ಜೆಡಿಎಸ್-ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

ಹೆಚ್​ಡಿಕೆ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು

ಹೆಚ್​ಡಿ ಕುಮಾರಸ್ವಾಮಿ ಮಂಡ್ಯದ ಸಂಸದ ಹಾಗೂ ಕೇಂದ್ರದ ಸಚಿವ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಈ ನಿಟ್ಟಿನಲ್ಲಿ ನಿನ್ನೆ ಸಕ್ಕರಿನಗರಿ ‌ಮಂಡ್ಯದಲ್ಲಿ ಹೆಚ್ ಡಿಕೆ, ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಜಿಲ್ಲೆಯ ಸಾವಿರಾರು ‌ಜನರು ಜನತಾ ದರ್ಶನ ಆಗಮಿಸಿ ತಮ್ಮ ಅಹವಾಲು ಸಲ್ಲಿಸಿದ್ರು. ಖುದ್ದು ಕುಮಾರಸ್ವಾಮಿ ಎಲ್ಲರ ಸಮಸ್ಯೆ ಆಲಿಸಿದ್ರು. ಆದರೆ ಈ ಒಂದು ಕಾರ್ಯಕ್ರಮಕ್ಕೆ ಜಿಲ್ಲೆಯ ಯಾವೊಬ್ಬ ಸರ್ಕಾರಿ ಅಧಿಕಾರಿಗಳು ಆಗಮಿಸಿರಲಿಲ್ಲ. ಇದು ಹೆಚ್ ಡಿಕೆ ಆಕ್ರೋಶಕ್ಕೂ ಕೂಡ ಕಾರಣವಾಗಿತ್ತು. ಹೀಗಾಗಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ‌ಗುಡುಗಿದ್ರು. ಮತ್ತೊಂದು ಕಡೆ ಚನ್ನಪಟ್ಟಣ ಉಪಚುನಾವಣೆ ದೃಷ್ಟಿಯಿಂದ ಸಾಕಷ್ಟು ಮಹತ್ವ ಕೂಡ ಪಡೆದುಕೊಂಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ