ಕ್ಲಾಸ್ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿ ಆಂಧ್ರ ಕಾಲೇಜು ವಿದ್ಯಾರ್ಥಿ ಸಾವು!
ಆಂಧ್ರಪ್ರದೇಶದ ಕಾಲೇಜು ವಿದ್ಯಾರ್ಥಿಯೊಬ್ಬ ತರಗತಿಯಿಂದ ಇದ್ದಕ್ಕಿದ್ದಂತೆ ಹೊರಗೆ ನಡೆದು, 3ನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾನೆ. ಕ್ಲಾಸ್ರೂಂನಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಏಕೆ ಕಾರಿಡಾರ್ಗೆ ಹೋಗಿ ಕೆಳಗೆ ಹಾರಿದ್ದಾನೆ ಎಂಬುದು ಗೊತ್ತಾಗಿಲ್ಲ. ಈ ದೃಶ್ಯ ಕ್ಲಾಸ್ರೂಂನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿಡಾರ್ ಕಟ್ಟೆಯ ಮೇಲೆ ನಿಂತು ಆತ ಮೂರನೇ ಮಹಡಿಯಿಂದ ಹಾರಿದಾಗ ತರಗತಿ ನಡೆಯುತ್ತಿತ್ತು. ಟೀಚರ್ ಎದುರಲ್ಲೇ ಆತ ಕೆಳಗೆ ಹಾರಿದ್ದಾನೆ.
ಹೈದರಾಬಾದ್: ಆಂಧ್ರಪ್ರದೇಶದ ನಾರಾಯಣ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸೆರೆಹಿಡಿಯುವ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಇಂದು ಬೆಳಿಗ್ಗೆ 10.15ಕ್ಕೆ ಕ್ಲಾಸ್ ನಡೆಯುವಾಗಲೇ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಕೊಠಡಿಯಿಂದ ಹೊರಗೆ ಹೋಗಿದ್ದಾನೆ. ಆತ ಹೋಗಿದ್ದನ್ನು ಬೇರೆ ವಿದ್ಯಾರ್ಥಿಗಳು ನೋಡುತ್ತಿದ್ದಂತೆಯೇ ಆತ ಕಾರಿಡಾರಿನ ಕಟ್ಟೆ ಹತ್ತಿ 3ನೇ ಫ್ಲೋರ್ನಿಂದ ಕೆಳಗೆ ಹಾರಿದ್ದಾನೆ. ಇದರಿಂದ ಶಾಕ್ ಆದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊರಗೆ ಬಂದು ನೋಡುವಷ್ಟರಲ್ಲಿ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos