ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
ಆಂಧ್ರಪ್ರದೇಶದ ಅಲ್ಲೂರಿ ಏಜೆನ್ಸಿ ಏರಿಯಾದ ಎಟಿಎಂ ಸೆಂಟರ್ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗಲು ಬಂದಿದ್ದ ಜನರಿಗೆ ವಿಚಿತ್ರವಾದ ಶಬ್ದ ಕೇಳಿದೆ. ಹಣ ತೆಗೆಯುವಾಗ ಸದ್ದು ಕೇಳಿ ಗ್ರಾಹಕರು ಮೊಬೈಲ್ ಟಾರ್ಚ್ ಬಿಟ್ಟು ನೋಡಿದಾಗ ಹಾವು ಕಂಡಿದೆ. ಅದನ್ನು ನೋಡಿ ಗಾಬರಿಯಾಗಿದ್ದಾರೆ.
ಆಂಧ್ರಪ್ರದೇಶದ ಅಲ್ಲೂರಿ ಏಜೆನ್ಸಿ ಏರಿಯಾದ ಎಟಿಎಂ ಸೆಂಟರ್ನಲ್ಲಿ ಹಾವೊಂದು ಹಣ ಡ್ರಾ ಮಾಡಿಕೊಂಡು ಹೋಗಲು ಒಳಗೆ ಬಂದಿತ್ತು! ಎಟಿಎಂನಲ್ಲಿ ಹಾವನ್ನು ನೋಡಿದ ಜನರಿಗೆ ಹೋಗೊಂದು ಆಲೋಚನೆ ಬಂದಿದ್ದು ಸುಳ್ಳಲ್ಲ. ಪಾಡೇರು ಮುಖ್ಯರಸ್ತೆಯಲ್ಲಿರುವ ಎಟಿಎಂ ಸೆಂಟರ್ನಲ್ಲಿ ನಾಗರ ಹಾವೊಂದು ಸದ್ದು ಮಾಡಿತ್ತು. ವ್ಯಕ್ತಿಯೊಬ್ಬ ಹಣ ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ತೆರಳಿದ್ದ. ಅಲ್ಲಿ ಹಣ ತೆಗೆಯುವಾಗ ಅನುಮಾನ ಬಂದಿತು. ಹಾವು ಬುಸ್ಗುಡುವ ಶಬ್ದಗಳೂ ಕೇಳಿತು. ಆಗ ಹಾವನ್ನು ಕಂಡು ಸುತ್ತಮುತ್ತಲಿನವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆ ಹಾವನ್ನು ಕಾಡಿಗೆ ಬಿಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ