ಹರಿಯಾಣದಲ್ಲಿ ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಭದ್ರತಾ ಲೋಪ ಉಂಟಾಗಿದೆ ಎಂಬ ಚರ್ಚೆ ಇದೀಗ ಶುರುವಾಗಿದೆ. ಹರಿಯಾಣಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕಾರಿನ ಪಕ್ಕದಲ್ಲೇ ಉದ್ದನೆಯ ಕೋಲು ಹಿಡಿದು ಬೈಕ್ನಲ್ಲಿ ಬರುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ.
ಹರಿಯಾಣಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಮತ್ತವರ ಬೆಂಗಾವಲು ಪಡೆಯ ವಾಹನಗಳು ರಸ್ತೆಯಲ್ಲೆ ಸಂಚರಿಸುವಾಗ ಅವರ ಪಕ್ಕದಲ್ಲೇ ಬೈಕ್ನಲ್ಲಿ ವ್ಯಕ್ತಿಯೊಬ್ಬರು ಉದ್ದನೆಯ ಕೋಲನ್ನು ಹಿಡಿದುಕೊಂಡು ಬರುತ್ತಿರುವ ವಿಡಿಯೋ ತೀವ್ರ ಚರ್ಚೆ ಹುಟ್ಟುಹಾಕಿದೆ. ರಾಹುಲ್ ಗಾಂಧಿಗೆ ಭದ್ರತಾ ಲೋಪ ಉಂಟಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ