ಪುಷ್ಪ ಸಿನಿಮಾ ಸ್ಟೈಲ್​ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್: ಕಳ್ಳಸಾಗಣೆದಾರರ ಬೇಟೆಯಾಡಿದ ಪೊಲೀಸರು

| Updated By: Ganapathi Sharma

Updated on: Feb 06, 2025 | 11:38 AM

ಆಂಧ್ರದ ನಲ್ಲಮಲ ಅರಣ್ಯದಿಂದ ಅಕ್ರಮವಾಗಿ ರಕ್ತಚಂದನ ಮರಗಳ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಆಂಧ್ರ ಪೊಲೀಸರು ಸ್ಮಗ್ಲರ್​​​ಗಳನ್ನು ಕರ್ನಾಟಕದ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿವರೆಗೆ ಚೇಸ್​​​ ಮಾಡಿ ಬಂಧಿಸಿದ್ದಾರೆ. ರಕ್ತ ಚಂದನ ಜಪ್ತಿ ಮಾಡಿದ್ದಾರೆ. ನೀಲಗಿರಿ ತೋಪಿನಲ್ಲಿದ್ದ ಕೋಟಿ ಕೋಟಿ ಬೆಲೆ ಬಾಳುವ ರಕ್ತಚಂದನ ಜಪ್ತಿ ಮಾಡಲಾಗಿದೆ.

ದೇವನಹಳ್ಳಿ, ಫೆಬ್ರವರಿ 6: ಪುಷ್ಪ ಸಿನಿಮಾದ ರೀತಿಯಲ್ಲಿ ಆಂಧ್ರದ ನಲ್ಲಮಲ ಅರಣ್ಯದಿಂದ ಅಕ್ರಮವಾಗಿ ರಕ್ತಚಂದನ ಮರಗಳ ಸಾಗಾಟ ಮಾಡುತ್ತಿದ್ದವರನ್ನು ಬೇಟೆಯಾಡಿದ ಆಂಧ್ರದ ಚಿತ್ತೂರು ಪೊಲೀಸರು, ನೀಲಗಿರಿ ತೋಪಿನಲ್ಲಿ ಅಡಗಿಸಿಟ್ಟಿದ್ದ 150 ರಕ್ತಚಂದನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ​​​ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಬಳಿ ರಕ್ತಚಂದನ ತುಂಡು ಜಪ್ತಿ ಮಾಡಲಾಗಿದೆ.