Chain snatcher nabbed: ಅಂಧ್ರಪ್ರದೇಶದಲ್ಲಿ ‘ಮಿಸ್ಟರ್ ಆಂಧ್ರ’ ಆಗಿದ್ದವನು ಬೆಂಗಳೂರಲ್ಲಿ ಮಿಸ್ಟರ್ ಸರಗಳ್ಳನಾಗಿ ಈಗ ಪೊಲೀಸರ ಅತಿಥಿ
ಸಯ್ಯದ್ ಗೆ ಹೈದರಾಬಾದ್ ನವಾಬರಂತೆ ಖಯಾಲಿಗಳು ಜಾಸ್ತಿ. ಹಾಗಾಗೇ ಮೋಜು ಮಾಡಲು ಬೆಂಗಳೂರಿಗೆ ಬರುತ್ತಿದ್ದ.
ಬೆಂಗಳೂರು: ಇಲ್ಲಿ ಕಾಣುತ್ತಿದ್ದಾನಲ್ಲ ಆಸಾಮಿ, ಇವನು ಆಂಧ್ರ ಪ್ರದೇಶದಲ್ಲಿ ‘ಮಿಸ್ಟರ್ ಅಂಧ್ರ’ (Mister Andhra) ಬೆಂಗಳೂರಲ್ಲಿ ‘ಮಿಸ್ಟರ್ ಸರಗಳ್ಳ’. ಹೌದು ಮಾರಾಯ್ರೇ, ದಿನದ ಹಲವಾರು ಗಂಟೆಗಳನ್ನು ಜಿಮ್ ನಲ್ಲಿ ವ್ಯಯಿಸಿ ದೇಹ ಸಾಮುಮಾಡಿಕೊಂಡು ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ನಡೆಯುವ ದೇಹದಾರ್ಢ್ಯ ಸ್ಪರ್ಧೆಗಳನ್ನು ಗೆದ್ದು ‘ಮಿಸ್ಟರ್ ಆಂಧ್ರ’ ಅಂತ ಕರೆಸಿಕೊಂಡ ಸಯ್ಯದ್ ಗೆ (Sayed) ಹೈದರಾಬಾದ್ ನವಾಬರಂತೆ ಖಯಾಲಿಗಳು ಜಾಸ್ತಿ. ಹಾಗಾಗೇ ಮೋಜು ಮಾಡಲು ಬೆಂಗಳೂರಿಗೆ ಬರುತ್ತಿದ್ದ. ಆದರೆ ಮೋಜಿಗೆ ದುಡ್ಡು ಬೇಕಲ್ಲ? ಅದಕ್ಕಾಗಿ ಅವನು ಬೆಂಗಳೂರಲ್ಲಿ ಆರಿಸಿಕೊಂಡಿದ್ದು ಸರಗಳ್ಳತನ. ತನ್ನ ಸ್ನೇಹಿತನೊಬ್ಬನೊಂದಿಗೆ ಕದ್ದ ಬೈಕೊಂದರಲ್ಲಿ ಮಹಿಳೆಯರ ಸರಗಳನ್ನು ಕದಿಯತ್ತಾ ಬೆಂಗಳೂರಲ್ಲಿ ಜಾಲಿಯಾಗಿ ಸಮಯ ಕಳೆಯುತ್ತಿದ್ದ ಸಯ್ಯದ್ ಮತ್ತವನ ಗೆಳೆಯ ಶೇಖ್ ಅಯ್ಯೂಬ್ ನನ್ನು (Sheikh Ayyub) ನಗರದ ಗಿರಿನಗರ ಪೊಲೀಸರು ಚಾಣಾಕ್ಷ್ಯತೆಯಿಂದ ಬಲೆಗೆ ಕೆಡವಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ