‘ಸಿಂಹ ಗುಹೆ’ ಸಿನಿಮಾದ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದ ಅನಿರುದ್ಧ್​ ಜತ್ಕರ್​

|

Updated on: Mar 28, 2024 | 9:06 PM

‘ಈ ಗೀತೆಯನ್ನು ನೋಡಿ ಬಹಳ ಖುಷಿ ಆಯಿತು. ವಿಷ್ಣುವರ್ಧನ್​ ಅವರ ಮೇಲೆ ಚಿತ್ರತಂಡದವರು ಹೊಂದಿರುವ ಅಭಿಮಾನದಿಂದ ನಾನು ಈ ಹೊಸ ತಂಡದವರಿಗೆ ಹಾರೈಸಲು ಬಂದಿದ್ದೇನೆ. ಹಾಡಿನ ಶೂಟಿಂಗ್​ ಸ್ಥಳ ತುಂಬ ಚೆನ್ನಾಗಿದೆ. ಚಿತ್ರೀಕರಣದ ಶೈಲಿ ಬಹಳ ಚೆನ್ನಾಗಿದೆ. ಸಿಂಹ ಗುಹೆ ಚಿತ್ರ ನೋಡಲು ನಾನು ಬರುತ್ತೇನೆ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ನಟ ಅನಿರುದ್ಧ್​ ಜತ್ಕರ್​ ಶುಭ ಕೋರಿದ್ದಾರೆ.

ಈ ಮೊದಲು ‘ಸಮರ್ಥ’, ‘ತಾಜಾ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್‌ಜಿಆರ್ ಅವರು ಈಗ ‘ಸಿಂಹ ಗುಹೆ’ (Simha Guhe) ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇದು ಅವರ 3ನೇ ಸಿನಿಮಾ. ನಿವಿಶ್ಕಾ ಪಾಟೀಲ್, ರವಿ ಶಿರೂರು ಅವರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಯಿತು. ಆ ಕಾರ್ಯಕ್ರಮಕ್ಕೆ ನಟ ಅನಿರುದ್ಧ್​ ಜತ್ಕರ್ (Anirudh Jatkar) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಿರ್ದೇಶಕ ಎಸ್​ಜಿಆರ್​ ಅವರು ವಿಷ್ಣುವರ್ಧನ್​ ಅವರ ದೊಡ್ಡ ಅಭಿಮಾನಿ. ಆ ಕಾರಣಕ್ಕೆ ಸಿನಿಮಾದ ಶೀರ್ಷಿಕೆಯನ್ನು ‘ಸಿಂಹ ಗುಹೆ’ ಎಂದು ಇಡಲಾಗಿದೆ. ವಿಷ್ಣುವರ್ಧನ್​ (Vishnuvardhan) ಅವರ ಅಳಿಯ ಅನಿರುದ್ಧ್ ಅವರಿಂದ ಸಾಂಗ್​ ಬಿಡುಗಡೆ ಮಾಡಿಸಿ ಅವರು ಖುಷಿಪಟ್ಟಿದ್ದಾರೆ. ಈ ಸಿನಿಮಾಗೆ ಎ.ಸಿ. ಮಹೇಂದರ್ ಛಾಯಾಗ್ರಹಣ ಹಾಗೂ ಸತೀಶ್ ಆರ್ಯನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಈ ಹಾಡನ್ನು ನೋಡಿ ಬಹಳ ಸಂತೋಷ ಆಯಿತು. ವಿಷ್ಣುವರ್ಧನ್​ ಮೇಲೆ ತಂಡದವರು ಇಟ್ಟಿರುವ ಅಭಿಮಾನದ ಕಾರಣದಿಂದ ಹೊಸ ತಂಡದವರಿಗೆ ಮನಸಾರೆ ಹಾರೈಸಲು ಬಂದಿದ್ದೇನೆ. ಹಾಡಿನ ಚಿತ್ರೀಕರಣ ಸ್ಥಳ ತುಂಬಾ ಚೆನ್ನಾಗಿದೆ. ಮೇಕಿಂಗ್​ ಶೈಲಿ ಬಹಳ ಚೆನ್ನಾಗಿದೆ. ಸಿನಿಮಾ ನೋಡಲು ಕೂಡ ಬರುತ್ತೇನೆ. ಈ ತಂಡದ ಪ್ರಯತ್ನ ನನಗೆ ಇಷ್ಟ ಆಯಿತು. ಇವರಿಗೆ ಯಶಸ್ಸು ಸಿಗಲಿ’ ಎಂದು ಅನಿರುದ್ಧ್​ ಜತ್ಕರ್​ ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.