ಬಾರ್ ಮಾಡಲು ಅಡ್ಡಿಯಾಗಿದೆ ಎಂದು ಆಂಜನೇಯ ಸ್ವಾಮಿಯ ದೇವಸ್ಥಾನವೇ ಧ್ವಂಸ!

Edited By:

Updated on: Nov 20, 2025 | 10:17 AM

ಬಾರ್​ ಮಾಡಲು ಅಡ್ಡಿಯಾದ ಕಾರಣಕ್ಕೆ ಆಂಜನೇಯ ಸ್ವಾಮಿಯ ದೇವಸ್ಥಾನವನ್ನೇ ಧ್ವಂಸ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ‌ತಾಲೂಕಿನ ನಂದಗುಡಿ ಗ್ರಾಮದಲ್ಲಿ ನಡೆದಿದೆ. ಬೆಳಿಗ್ಗೆ ವಾಕಿಂಗ್ ಬಂದಿದ್ದವರು ದೇಗಲು ನೆಲಸಮ ಆಗಿದ್ದನ್ನು ಗಮನಿಸಿದ್ದಾರೆ. ಈ ಬಗ್ಗೆ ನಂದಗುಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ದೇವಸ್ಥಾನದ ಭಕ್ತರು ದೌಡಾಯಿಸಿದ್ದಾರೆ.

ದೇವನಹಳ್ಳಿ, ನವೆಂಬರ್​ 20: ಬಾರ್​ ಮಾಡಲು ಅಡ್ಡಿಯಾದ ಕಾರಣಕ್ಕೆ ರಾತ್ರೋ ರಾತ್ರಿ ಜೆಸಿಬಿ ತಂದು ಕಿಡಿಗೇಡಿಗಳು ಆಂಜನೇಯ ಸ್ವಾಮಿಯ ದೇವಸ್ಥಾನವನ್ನೇ ಧ್ವಂಸ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ‌ತಾಲೂಕಿನ ನಂದಗುಡಿ ಗ್ರಾಮದಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಬಾರ್​​ಗೆ ಅನುಮತಿ ಕೋರಿ ಕೆಲವರು ಅರ್ಜಿ ಸಲ್ಲಿಸಿದ್ದರು.  ಆದರೆ ಬಾರ್ ಮಾಡಲು ಉದ್ದೇಶಿಸಿರುವ ಜಾಗದ ಬಳಿಯೇ ದೇವಸ್ಥಾನವಿದೆ. ಹೀಗಾಗಿ ಅನುಮತಿ ನೀಡಬಾರದು ಎಂದು ಅಬಕಾರಿ ಇಲಾಖೆಗೆ ದೇವಸ್ಥಾನದ ಸಮಿತಿ ಅರ್ಜಿ ಹಾಕಿತ್ತು. ಇದೇ ಕಾರಣಕ್ಕೆ ದೇವಸ್ಥಾನ ಧ್ವಂಸ ಮಾಡಲಾಗಿದ್ದು, ಬೆಳಿಗ್ಗೆ ವಾಕಿಂಗ್ ಬಂದಿದ್ದವರು ದೇಗುಲ ನೆಲಸಮ ಆಗಿದ್ದನ್ನು ಗಮನಿಸಿದ್ದಾರೆ. ಈ ಬಗ್ಗೆ ನಂದಗುಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ದೇವಸ್ಥಾನದ ಭಕ್ತರು ದೌಡಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.