ಮಂಗಳೂರು; ದೈವ ಕ್ಷೇತ್ರದಲ್ಲಿ ಮತ್ತೊಂದು ಪವಾಡ, ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ

| Updated By: ಆಯೇಷಾ ಬಾನು

Updated on: Jun 29, 2024 | 2:12 PM

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶ್ರೀ ಸತ್ಯದೇವತೆ ದೈವಸ್ಥಾನ ಮುಂದೆ ಪವಾಡ ನಡೆದಿದೆ. ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್ ಆಟೋ ಇದ್ದಕ್ಕಿದ್ದಂತೆ ಚಾಲಿಸಿದೆ. ಆಟೋ ಬೈಕ್​ಗೆ ಡಿಕ್ಕಿ ಹೊಡೆದು ಮುಂದೆ ಸಾಗಿದ್ದು ಆಟೋ ಚಾಲಕ ತಕ್ಷಣ ದೈವಸ್ಥಾನದಿಂದ ಓಡಿಹೋಗಿ ಆಟೋ ನಿಲ್ಲಿಸಿದ್ದಾರೆ.

ಮಂಗಳೂರು, ಜೂನ್.29: ದೈವ (Daiva)ಕ್ಷೇತ್ರದಲ್ಲಿ ಮತ್ತೊಂದು ಪವಾಡ ನಡೆದಿದೆ. ಲಾಕ್ ಮಾಡಿ ನಿಲ್ಲಿಸಿದ್ದ ಅಟೋ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಚಾಲಿಸಿದೆ. ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್ ಆಟೋ ಇದ್ದಕ್ಕಿದ್ದಂತೆ ಚಾಲಿಸಿದೆ. ಜೂ.28 ರಂದು ಬೆಳಗ್ಗೆ 10:30 ಗಂಟೆಗೆ ಕಾರ್ಣಿಕ ಕ್ಷೇತ್ರ ಅಳದಂಗಡಿಯ ಶ್ರೀ ಸತ್ಯದೇವತೆ ದೈವಸ್ಥಾನ ಮುಂದೆ ಆಟೋ ನಿಲ್ಲಿಸಿ ಚಾಲಕ ದೈವಸ್ಥಾನಕ್ಕೆ ಹೋಗಿದ್ದ. ಈ ವೇಳೆ ಆಟೋ ತನ್ನಂತಾನೆ ಸ್ಟಾರ್ಟ್ ಆಗಿ ಮುಂದಕ್ಕೆ ಚಲಿಸಿದೆ. ಅಷ್ಟೇ ಅಲ್ಲದೆ ಮುಂದೆ ನಿಂತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಆಟೋ ಚಲಿಸುವುದನ್ನು ಗಮನಿಸಿದ ಚಾಲಕ ತಕ್ಷಣ ದೈವಸ್ಥಾನದಿಂದ ಓಡಿಹೋಗಿ ಆಟೋ ನಿಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶ್ರೀ ಸತ್ಯದೇವತೆ ದೈವಸ್ಥಾನ ಮುಂದೆ ಘಟನೆ ನಡೆದಿದೆ. ಘಟನೆಯ ದೃಷ್ಯ ದೈವಸ್ಥಾನದ ಸಿಸಿಕ್ಯಾಮದಲ್ಲಿ ಸೆರೆಯಾಗಿದೆ. ಐದು ವರ್ಷದ ಹಿಂದೆ ಇದೇ ಜಾಗದಲ್ಲಿ ಪವಾಡ ನಡೆದಿತ್ತು.

ಉಡುಪಿ ಶಿರೂರು ಮಠದ ಸ್ವಾಮೀಜಿ ನಿಧನ ಹೊಂದಿದ್ದ ಕೇಸ್​ ಸಂಬಂಧ ರಮ್ಯಾ ಶೆಟ್ಟಿ ವಶಕ್ಕೆ ಪಡೆಯಲು ಪೊಲೀಸರು ಯತ್ನಿಸುತ್ತಿರುವಾಗ ಬುರ್ಖಾ ಧರಿಸಿ ಕಾರಿನಲ್ಲಿ ಪರಾರಿ ಆಗುತ್ತಿದ್ದ ರಮ್ಯಾ ಶೆಟ್ಟಿಯ ಕಾರು ಇದೇ ದೈವಸ್ಥಾನದ ಮುಂದೆ ಪಂಕ್ಚರ್ ಆಗಿತ್ತು. ಕ್ಷಿಪ್ರ ಕಾರ್ಯಾಚರಣೆ ಮೂಲಕ ಪೊಲೀಸರು ರಮ್ಯಾ ಶೆಟ್ಟಿ ವಶಕ್ಕೆ ಪಡೆದಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:11 pm, Sat, 29 June 24

Follow us on