ಸೈಟುಗಳನ್ನು ಮುಡಾಗೆ ಹಿಂತಿರುಗಿಸುವುದು ಕಳ್ಳನೊಬ್ಬ ಕದ್ದ ಮಾಲನ್ನು ವಾಪಸ್ಸು ಕೊಟ್ಟಂತೆ: ಗಂಗರಾಜು
ಖರೀದಿಸಿದ ನಿವೇಶನಗಳನ್ನು ವಾಪಸ್ಸು ಕೊಡೋದ್ರಲ್ಲಿ ಯಾವುದೇ ಅರ್ಥವಿಲ್ಲ, ವಾಪಸ್ಸು ಕೊಡುವ ಮೂಲಕ ಕಳಂಕದಿಂದ ತಪ್ಪಿಸಿಕೊಳ್ಳಬಹುದೆಂದು ಸಿದ್ದರಾಮಯ್ಯ ಭಾವಿಸಿದ್ದಾರೆ, ಪೊಲೀಸರು ಬಂಧಿಸಲು ಬಂದಾಗ ಕಳ್ಳನೊಬ್ಬ ಕದ್ದ ಮಾಲನ್ನು ವಾಪಸ್ಸು ಕೊಡುತ್ತೇನೆಂದರೆ ಅವನು ಅಪರಾಧಮುಕ್ತನಾಗುವನೇ ಎಂದು ಗಂಗರಾಜು ಮಾರ್ಮಿಕವಾಗಿ ಪ್ರಶ್ನಿಸಿದರು.
ಮೈಸೂರು: ಮುಡಾ ಹಗರಣದ ಪೆಡಂಭೂತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯರ ಬೆನ್ನು ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಸಾಮಾಜಿಕ ಕಾರ್ಯಕರ್ತ ಗಂಗರಾಜು ಸಿಎಂ ಪತ್ನಿಯವರನ್ನೊಳಗೊಂಡ ಮತ್ತೊಂದು ಭೂಹಗರಣವನ್ನು ಬಯಲಿಗೆಳೆದಿದ್ದಾರೆ. ಗಣೇಶ್ ಅವರಿಂದ ಸುಮಾರು 21,000 ಚದರ ಅಡಿ ಜಾಗವನ್ನು ಸೆಪ್ಟಂಬರ್ 2023 ರಲ್ಲಿ ಖರೀದಿಸಿದ ಪಾರ್ವರ್ತಿ ಅವರು ಅದು ವಿವಾದಾತ್ಮಕ ಅಂತ ಗೊತ್ತಾದ ಬಳಿಕ ಎರಡು ಸಲ ತಿದ್ದುಪಾಟು ಮಾಡಿದಾಗ್ಯೂ ಮುಡಾಗೆ ವಾಪಸ್ಸು ನೀಡಿದ್ದಾರೆಂದು ಗಂಗರಾಜು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಅಧಿಕೃತವಾಗಿ ಇಡಿ ಎಂಟ್ರಿ: ಮೊದಲ ಸಮನ್ಸ್ ಜಾರಿ, ಯಾರಿಗೆ ಗೊತ್ತಾ?