ಉಡುಪಿ: ಮರ ತೆರವು ಮಾಡುತ್ತಿದ್ದಾಗ ಉರುಳಿದ ಮತ್ತೊಂದು ಮರ; ಕೂದಲೆಳೆ ಅಂತರದಲ್ಲಿ ಬಚಾವ್ ಆದ ಬೈಂದೂರು ಶಾಸಕ

| Updated By: Rakesh Nayak Manchi

Updated on: Jun 29, 2023 | 2:17 PM

Udupi News: ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಮಳೆಗೆ ಧರೆಗುರುಳಿದ ಮರ ತೆರವು ಮಾಡುತ್ತಿದ್ದಾಗ ಮತ್ತೊಂದು ಮರ ಬಿದ್ದಿದ್ದು, ಕೂಡಲೇ ಎಚ್ಚೆತ್ತ ಶಾಸಕರು ಪಕ್ಕಕ್ಕೆ ಓಡಿ ಬಚಾವ್ ಆಗಿದ್ದಾರೆ.

ಉಡುಪಿ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಇಂದು ಮಳೆಯಾಗಿದ್ದು (Udupi Rain), ಹಾಲಾಡಿ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿದೆ. ಇದೇ ರಸ್ತೆ ಮೂಲಕ ಹೋಗುತ್ತಿದ್ದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ (Gururaj Shetty Gantihole) ಅವರು ತಮ್ಮ ಬೆಂಬಲಿಗರೊಂದಿಗೆ ಮರ ತೆರವು ಕಾರ್ಯಕ್ಕೆ ಕೈಜೋಡಿಸಿದರು. ಈ ವೇಳೆ ಮತ್ತೊಂದು ಮರ ಬೀಳುವುದನ್ನು ಕಂಡ ಶಾಸಕರು ಮತ್ತು ಬೆಂಬಲಿಗರು ಪಕ್ಕಕ್ಕೆ ಓಡಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jun 29, 2023 02:15 PM