ಮುರುಘಾ ಮಠದಲ್ಲಿ ಮತ್ತೊಂದು ಅಹಿತಕರ ಪ್ರಕರಣ, 4 ದಿನಗಳಿಂದ ಮಗಳು ಕಾಣುತ್ತಿಲ್ಲ ಎಂದು ಪೋಷಕರೊಬ್ಬರ ದೂರು
ಮಗಳು ಸಿಗದೆ ಹೋದರೆ ಸುಪ್ರೀಮ್ ಕೋರ್ಟ್ ಬಾಗಿಲು ತಟ್ಟುತ್ತೇನೆ ಅಂತ ಅವರು ಕೋಪಭರಿತ ಹತಾಷ ಧ್ವನಿಯಲ್ಲಿ ಹೇಳುತ್ತಿದ್ದಾರೆ.
ಚಿತ್ರದುರ್ಗ (Chitradurga) ಮುರುಘಾ ಮಠ ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುತ್ತಿದೆ. ಮೊದಲಿಗೆ ಮಠದ ಶ್ರೀಗಳು ಶಿವಮೂರ್ತಿ ಸ್ವಾಮೀಜಿ ಅವರ ವಿರುದ್ಧ ಬಾಲಕಿಯುರ ವಿರುದ್ಧ ಲೈಂಗಿಕ ಆರೋಪಗಳು ಕೇಳಿಬಂದವು ಮತ್ತು ಅವರ ವಿರುದ್ಧ ಪೋಕ್ಸೋ (POCSO) ಅಡಿ ಪ್ರಕರಣ ದಾಖಲಾಗಿ ಗುರುವಾರ ರಾತ್ರಿ ಬಂಧನವಾಯಿತು. ಶುಕ್ರವಾರ ಬೆಳಗ್ಗೆ ಬೆಂಗಳೂರಿನ ದೃಷ್ಟಿಮಾಂದ್ಯ (visually impaired) ಪೋಷಕರೊಬ್ಬರು ಮಠದ ಶಾಲೆಯಲ್ಲಿ ಓದುತ್ತಿದ್ದ ತಮ್ಮ ಮಗಳು 4 ದಿನಗಳಿಂದ ಕಾಣಿಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಮಗಳು ಸಿಗದೆ ಹೋದರೆ ಸುಪ್ರೀಮ್ ಕೋರ್ಟ್ ಬಾಗಿಲು ತಟ್ಟುತ್ತೇನೆ ಅಂತ ಅವರು ಕೋಪಭರಿತ ಹತಾಷ ಧ್ವನಿಯಲ್ಲಿ ಹೇಳುತ್ತಿದ್ದಾರೆ.
Latest Videos