ಮಠಾಧೀಶರನ್ನು ದೇವರೆಂದು ಭಾವಿಸುವ ಸಂಸ್ಕೃತಿ ನಮ್ಮದು, ಶಿವಮೂರ್ತಿ ಸ್ವಾಮೀಜಿ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳಾಗಲಿ: ಈಶ್ವರಪ್ಪ
ನಾವೆಲ್ಲ ಮಠಾಧೀಶರನ್ನು ದೇವರೆಂದು ಭಾವಿಸುವುದರಿಂದ ಅವರ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳಾಗಲಿ ಅಂದುಕೊಳ್ಳುತ್ತೇನೆ ಎಂದು ಈಶ್ವರಪ್ಪ ಹೇಳಿದರು.
ಮಂಗಳೂರು: ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಅವರ ವಿರುದ್ಧ ಆರೋಪ, ಪೋಕ್ಸೋ ಅಡಿ ಪ್ರಕರಣ ದಾಖಲು ಮತ್ತು ಅವರ ಬಂಧನವಾಗಿದ್ದು ದುರದೃಷ್ಟಕರ ಎಂದು ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಶುಕ್ರವಾರ ಮಂಗಳೂರಲ್ಲಿ ಹೇಳಿದರು. ನಮ್ಮ ರಾಜ್ಯ ಮತ್ತು ದೇಶದಲ್ಲಿ ಸ್ವಾಮೀಜಿಗಳ ಬಗ್ಗೆ ಅಪಾರವಾದ ಗೌರವ ಇದೆ, ಸ್ವಾಮಿಗಳ ಪಾದ ತೊಳೆದ ನೀರನ್ನು ತೀರ್ಥ ಎಂದು ಸ್ವೀಕರಿಸುವ ಸಂಸ್ಕೃತಿ ನಮ್ಮದು ಮತ್ತು ನಾವೆಲ್ಲ ಮಠಾಧೀಶರನ್ನು ದೇವರೆಂದು ಭಾವಿಸುವುದರಿಂದ ಅವರ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳಾಗಲಿ ಅಂದುಕೊಳ್ಳುತ್ತೇನೆ ಎಂದು ಈಶ್ವರಪ್ಪ ಹೇಳಿದರು.
Latest Videos