ಶಿವಮೂರ್ತಿ ಸ್ವಾಮೀಜಿಗಳಿಗೆ ಹೃದಯ ಸಂಬಂಧಿ ಸಮಸ್ಯೆ, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ರವಾನೆ: ಜಿಲ್ಲಾ ಸರ್ಜನ್
ಸ್ವಾಮೀಜಿಗಳು 10 ವರ್ಷಗಳಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಹಾಗೂ ಅವರ ಇಸಿಜಿ ಮಾಡಿಸಿದಾಗ ಹೃದಯದಲ್ಲಿ ಸಮಸ್ಯೆ ಇರೋದು ಪತ್ತೆಯಾಗಿದೆ ಎಂದು ಸರ್ಜನ್ ಹೇಳಿದರು.
ಚಿತ್ರದುರ್ಗದ ಜಿಲ್ಲಾ ಸರ್ಜನ್ ಬಸವರಾಜ್ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ ಪೋಕ್ಸೋ ಪ್ರಕರಣದಡಿ ಅರೆಸ್ಟ್ ಆಗಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮಿಗಳ ಹೃದಯ ಸಮಸ್ಯೆ ಹೆಚ್ಚಾಗಿದ್ದು ಅವರ ಸ್ಥಿತಿ ನಾಜೂಕಾಗಿರುವುದರಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ. ಸ್ವಾಮೀಜಿಗಳು 10 ವರ್ಷಗಳಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಹಾಗೂ ಅವರ ಇಸಿಜಿ ಮಾಡಿಸಿದಾಗ ಹೃದಯದಲ್ಲಿ ಸಮಸ್ಯೆ ಇರೋದು ಪತ್ತೆಯಾಗಿದೆ ಎಂದು ಸರ್ಜನ್ ಹೇಳಿದರು.
Published on: Sep 02, 2022 02:28 PM
Latest Videos