ತಾಲಿಬಾನ್-ವಿರೋಧಿ ಪಂಜಶೀರ್ ನಾಯಕ ಅಹ್ಮದ್ ಮಸ್ಸೂದ್ ತನ್ನ ಜನರನ್ನು ಸಮರಕ್ಕೆ ಅಣಿಗೊಳಿಸುತ್ತಿದ್ದಾರೆ
ಮಂಗಳವಾರದಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅಹ್ಮದ್ ಮಸ್ಸೂದ್, ತಾಲಿಬಾನ್ ಜೊತೆ ಮಾತುಕತೆಯ ನಿರೀಕ್ಷೆಯಲ್ಲಿರುವುದಾಗಿ ಹೇಳಿದರಾದರೂ ಯುದ್ಧಕ್ಕೆ ತಾವು ಸಿದ್ಧರಿರುವುದಾಗಿ ಹೇಳಿದರು.
ತಾಲಿಬಾನ್ ಅಫಘಾನಿಸ್ತಾನದ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡಿರುವುದು ನಿಜವಾದರೂ ಈಶಾನ್ಯ ಪ್ರಾಂತ್ಯದ ಪಂಜಶೀರ್ ಇನ್ನೂ ಅದರ ಹಿಡಿತಕ್ಕೆ ಸಿಕ್ಕಿಲ್ಲ. ತಾಲಿಬಾನಿಗಳೊಂದಿಗೆ ಫಿಕ್ಸಿಂಗ್ ಮಾಡಿಕೊಂಡಿದ್ದ ಅಫಘಾನಿಸ್ತಾನದ ಸೇನೆ ಸುಲಭವಾಗಿ ಶಸ್ತ್ರಗಳನ್ನು ಚೆಲ್ಲಿತು. ಆದರೆ ಪಂಜಶೀರ್ ಯೋಧರು ಆತ್ಮಗೌರವ ಉಳ್ಳವರು ಹಾಗೂ ಪರಾಕ್ರಮಶಾಲಿಗಳು. ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎನ್ನುವ ಮನೋಭಾವದವರು. ತಾಲಿಬಾನಿ ಸೇನೆ ಪಂಜಶೀರ್ ಪ್ರಾಂತ್ಯದತ್ತ ನುಗ್ಗುತ್ತಿದೆ, ಅದರ ಹತ್ತಿರದ ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಆದರೆ ಪಂಜಶೀರ್ ಜನ ಒಂದಿಷ್ಟೂ ವಿಚಲಿತರಾಗಿಲ್ಲ. ಕೊನೆ ಉಸಿರಿರುವವರೆಗೆ ಹೋರಾಡುವ ಪಣ ತೊಟ್ಟಿದ್ದಾರೆ.
ತಾಲಿಬಾನ್ಗೆ ಸಿಂಹಸ್ವಪ್ನವಾಗಿದ್ದ ತಾಲಿಬಾನ್-ವಿರೋಧಿ ಸಂಘಟನೆಯ ಕಮಾಂಡರ್ ಆಗಿದ್ದ ಲೆಜೆಂಡರಿ ಅಹ್ಮದ್ ಶಾ ಮಸ್ಸೂದ್ ಅವರ ಮಗ ಅಹ್ಮದ್ ಮಸ್ಸೂದ್, ತಂದೆಯಂತೆಯೇ ಅಹ್ಮದ್ ಮಸ್ಸೂದ್ ಸಹ ಪಂಜಶೀರ್ ಜನರನ್ನು ಹುರಿದುಂಬಿಸುತ್ತಾ ಅವರನ್ನು ಯುದ್ಧಕ್ಕೆ ಅಣಿಗೊಳಿಸುತ್ತಿದ್ದಾರೆ.
ಮಂಗಳವಾರದಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅಹ್ಮದ್ ಮಸ್ಸೂದ್, ತಾಲಿಬಾನ್ ಜೊತೆ ಮಾತುಕತೆಯ ನಿರೀಕ್ಷೆಯಲ್ಲಿರುವುದಾಗಿ ಹೇಳಿದರಾದರೂ ಯುದ್ಧಕ್ಕೆ ತಾವು ಸಿದ್ಧರಿರುವುದಾಗಿ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಮತ್ತು ವಿಡಿಯೋಗಳ ಪ್ರಕಾರ ಪಕ್ಕದ ತಜಿಕಿಸ್ತಾನ್ ನಿಂದ ಹೆಲಿಕ್ಯಾಪ್ಟರ್ಗಳು ಪಂಜಶೀರ್ ಕಣಿವೆಯಲ್ಲಿ ಬಂದಿಳಿದಿವೆ.
‘ಪಂಜಶೀರ್ ಜನ ಒಗ್ಗಟ್ಟಿನಿಂದ ಇದ್ದಾರೆ. ಅವರು, ತಮ್ಮ ಪ್ರಾಂತ್ಯವನ್ನು ರಕ್ಷಿಸಿಕೊಳ್ಳಲು ಮತ್ತು ಸರ್ವಾಧಿಕಾರಿ ಧೋರಣೆಯ ತಾಲಿಬಾನಿಗಳ ವಿರುದ್ಧ ಹೋರಾಡಲು ಸನ್ನದ್ಧರಾಗಿದ್ದಾರೆ,’ ಎಂದು ಅಹ್ಮದ್ ಮಸ್ಸೂದ್ ಹೇಳಿದ್ದಾರೆ.
ಪಂಜಶೀರ್ ನೆರೆಯಲ್ಲಿರುವ ಬಘ್ಲಾನ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಮತ್ತು ಅಲ್ಲಿಯ ಜನ ತಾಲಿಬಾನಿಗಳನ್ನೇ ಹಿಮ್ಮೆಟ್ಟಿಸಿರುವ ತದ್ವಿರುದ್ಧ ವದಂತಿಗಳ ನಡುವೆ ಪಂಜಶೀರ್ ಜನ ನಿರಾತಂಕವಾಗಿ ಜೀವಿಸುತ್ತಿದ್ದಾರೆ
ತಾಲಿಬಾನ್ ಬಾತ್ಮೀದಾರ ಜಬಿಹುಲ್ಲಾಹ್ ಮುಜಾಹಿದ್ ಮಾತ್ರ ಪಜಶೀರ್ ಹತ್ತಿರದ ಬಘ್ಲಾನ್ ಪ್ರಾಂತ್ಯದ ದೆಹ್ ಸಲಾಹ್ ಮತ್ತು ಪುಲ್-ಎ ಹೆಸರ್ ಜಿಲ್ಲೆಗಳನ್ನು ತನ್ನ ಸೇನೆಗಳು ರೆಸಿಸ್ಟನ್ಸ್ 2 ನಿಂದ ಪುನರ್ ವಶಪಡಿಸಿಕೊಂಡಿವೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: Shocking Video: ಫ್ಯಾಮಿಲಿ ಡಿನ್ನರ್ ವೇಳೆ ಮಗುವಿನ ಪಕ್ಕದಲ್ಲೇ ಮುರಿದು ಬಿತ್ತು ಸೀಲಿಂಗ್ ಫ್ಯಾನ್; ಶಾಕಿಂಗ್ ವಿಡಿಯೋ ಇಲ್ಲಿದೆ