Kabzaa: ‘ಕಬ್ಜ’ ಚಿತ್ರದಲ್ಲಿ ಅನೂಪ್​ ರೇವಣ್ಣ ನಟನೆ; ಪಾತ್ರದ ಬಗ್ಗೆ ಬಾಯ್ಬಿಟ್ಟ ‘ಹೈಡ್​ ಆ್ಯಂಡ್​ ಸೀಕ್​’ ಹೀರೋ

Updated on: Mar 07, 2023 | 12:56 PM

Anup Revanna | Kabzaa Movie: ‘ಕಬ್ಜ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮಾತು ಕಡಿಮೆ. ಆದರೆ ಕೈ ಮಾಡಿ ಮುಂದೆ ನುಗ್ಗುವಂತಹ ಪಾತ್ರ’ ಎಂದು ಅನೂಪ್​ ರೇವಣ್ಣ ಹೇಳಿದ್ದಾರೆ. ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲೂ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಬಹುನಿರೀಕ್ಷಿತ ‘ಕಬ್ಜ’ (Kabzaa Movie) ಸಿನಿಮಾದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್​ ನಟಿಸಿದ್ದಾರೆ. ಅವರ ಜೊತೆ ಅನೂಪ್​ ರೇವಣ್ಣ (Anup Revanna) ಕೂಡ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರ ರಗಡ್​ ಮತ್ತು ರಫ್​ ಆಗಿರಲಿದೆ ಎಂಬುದು ಈಗ ಗೊತ್ತಾಗಿದೆ. ಉಪೇಂದ್ರ ಅವರ ಬಲಗೈ ಬಂಟನಾಗಿ ಅನೂಪ್​ ಪಾತ್ರ ಇರಲಿದೆ. ಆ ಪಾತ್ರದ ಹೆಸರು ಟಾರ್ಗೆಟ್​. ಇಡೀ ಚಿತ್ರದಲ್ಲಿ ಅವರು ಉಪೇಂದ್ರ (Upendra) ಜೊತೆ ಕಾಣಿಸಿಕೊಳ್ಳುತ್ತಾರೆ. ‘ಮಾತು ಕಡಿಮೆ. ಆದರೆ ಕೈ ಮಾಡಲು ಮುಂದೆ ನುಗ್ಗುವ ಪಾತ್ರ ನನ್ನದು’ ಎಂದು ಅನೂಪ್​ ರೇವಣ್ಣ ಹೇಳಿದ್ದಾರೆ. ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲೂ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ‘ಕಬ್ಜ’ ತೆರೆಕಂಡ ಬಳಿಕ ಆ ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More