ನೇಹಾ ಗೌಡ ಮಗಳು ಶಾರದಾ ಜೊತೆ ಖುಷಿಯ ಕ್ಷಣ ಕಳೆದ ಅನುಪಮಾ ಗೌಡ

| Updated By: ಡಾ. ಭಾಸ್ಕರ ಹೆಗಡೆ

Updated on: Mar 29, 2025 | 10:11 AM

ಅನುಪಮಾ ಗೌಡ ಹಾಗೂ ನೇಹಾ ಗೌಡ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇತ್ತೀಚೆಗೆ ನೇಹಾ ಗೌಡ ಅವರು ತಮ್ಮ ಮಗಳಿಗೆ ಶಾರದಾ ಎಂದು ಹೆಸರು ಇಟ್ಟಿದ್ದಾರೆ. ಈ ನಾಮಕರಣ ಶಾಸ್ತ್ರಕ್ಕೆ ಅನುಪಮಾ ಗೌಡ ಅವರು ತೆರಳಿದ್ದರು. ಈ ಸಂದರ್ಭದ ವಿಡಿಯೋನ ಹಂಚಿಕೊಂಡು ಸಂಭ್ರಮಿಸಿದ್ದಾರೆ ಅನುಪಮಾ ಗೌಡ.

ನೇಹಾ ಗೌಡ ಹಾಗೂ ಚಂದನ್ ಗೌಡ (Chandan Gowda) ದಂಪತಿ ಇತ್ತೀಚೆಗೆ ತಮ್ಮ ಮಗಳಿಗೆ ಶಾರದಾ ಎಂದು ನಾಮಕರಣ ಮಾಡಿದ್ದಾರೆ. ಎಲ್ಲರೂ ಫ್ಯಾನ್ಸಿ ಹೆಸರಿನ ಹಿಂದೆ ಓಡೋ ಈ ಸಮಯದಲ್ಲಿ ನೇಹಾ ಅವರು ಸಾಂಪ್ರದಾಯಿಕ ಹೆಸರನ್ನು ಇಟ್ಟಿದ್ದಾರೆ. ನಾಮಕರಣ ಶಾಸ್ತ್ರಕ್ಕೆ ನೇಹಾ ಅವರ ಆಪ್ತರೆಲ್ಲರೂ ಬಂದಿದ್ದರು. ಅದರಲ್ಲಿ ಅನುಪಮಾ ಗೌಡ ಕೂಡ ಒಬ್ಬರು. ಇಬ್ಬರ ಮಧ್ಯೆ ಉತ್ತಮ ಗೆಳೆತನ ಇದೆ. ಹೀಗಾಗಿ, ನಾಮಕರಣ ಶಾಸ್ತ್ರಕ್ಕೆ ಅವರು ಹಾಜರಿ ಹಾಕಿ, ಆ ವಿಡಿಯೋನ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Mar 29, 2025 08:31 AM