‘ಎಲ್ಲರನ್ನೂ ಮದುವೆ ಆಗೋಕೆ ಆಗತ್ತಾ?’; ಕಾಲೆಳೆಯಲು ಬಂದ ಅನುಶ್ರೀಗೆ ಅದಿತಿ ಪ್ರಭುದೇವ ಉತ್ತರ
ಅದಿತಿ ಅವರು ‘ದಿಲ್ ಪಸಂದ್’ ಪ್ರೀ-ರಿಲೀಸ್ ಇವೆಂಟ್ಗೆ ಆಗಮಿಸಿದ್ದರು. ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಅದಿತಿ ಪ್ರಭುದೇವ (Aditi Prabhudeva) ಅವರು ಮದುವೆ ಆಗುತ್ತಿದ್ದಾರೆ. ನವೆಂಬರ್ 27ರಂದು ಅದ್ದೂರಿಯಾಗಿ ಅವರ ವಿವಾಹ ಯಶಸ್ವಿ (ಯಶಸ್) ಜತೆ ನಡೆಯಲಿದೆ. ಅದಿತಿ ಅವರು ‘ದಿಲ್ ಪಸಂದ್’ (Dil Pasand Movie) ಪ್ರೀ-ರಿಲೀಸ್ ಇವೆಂಟ್ಗೆ ಆಗಮಿಸಿದ್ದರು. ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಕಾರ್ಯಕ್ರಮವನ್ನು ಅನುಶ್ರೀ ಅವರು ನಿರೂಪಣೆ ಮಾಡುತ್ತಿದ್ದರು. ‘ತುಂಬಾ ಹುಡುಗರ ಹಾರ್ಟ್ನ ಬ್ರೇಕ್ ಮಾಡುತ್ತಿದ್ದೀರಿ’ ಎಂದು ಅನುಶ್ರೀ ಹೇಳಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಅದಿತಿ ಅವರು, ‘ಎಲ್ಲರನ್ನೂ ಮದುವೆ ಆಗೋಕೆ ಆಗತ್ತಾ’ ಎಂದು ಪ್ರಶ್ನೆ ಮಾಡಿದರು.