ಹಿಂದೂ ಧರ್ಮ ಅನ್ನೋದು ಇಲ್ಲ, ಅದೊಂದು ಬಳುವಳಿ: ಸತೀಶ್ ಜಾರಕಿಹೊಳಿ ವಿವಾದ ಬೆನ್ನಲ್ಲೆ ರಮೇಶ್ ಕತ್ತಿ ವಿಡಿಯೋ ವೈರಲ್
ಹಿಂದೂ ಧರ್ಮ ಅನ್ನೋದು ಇಲ್ಲಾ ಅದೊಂದು ಬಳುವಳಿ ಜೀವನ ಶೈಲಿ. ಬಹಳಷ್ಟು ಪುಸ್ತಕಗಳನ್ನ ನಾನು ಓದಿದ್ದೇನೆ ಹಿಂದೂ ಧರ್ಮ ಅನ್ನೋದಿಲ್ಲ. -ರಮೇಶ್ ಕತ್ತಿ
ಬೆಳಗಾವಿ: ಹಿಂದೂ ಶಬ್ದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಹಿಂದೂ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆ ವಿಡಿಯೋ ಈಗ ವೈರಲ್ ಆಗಿದೆ. ಹಿಂದೂ ಧರ್ಮ ಅನ್ನೋದರ ಬಗ್ಗೆ ಇವತ್ತು ಚರ್ಚೆ ಆಗುತ್ತಿದೆ.
ಹಿಂದೂ ಧರ್ಮ ಅನ್ನೋದು ಇಲ್ಲಾ ಅದೊಂದು ಬಳುವಳಿ ಜೀವನ ಶೈಲಿ. ಬಹಳಷ್ಟು ಪುಸ್ತಕಗಳನ್ನ ನಾನು ಓದಿದ್ದೇನೆ ಹಿಂದೂ ಧರ್ಮ ಅನ್ನೋದಿಲ್ಲ. ಹಾಗಾದ್ರೆ ಹಿಂದೂ ಅನ್ನೋ ಶಬ್ದ ಹೇಗೆ ಬಂತು? ಹಿಮಾಲಯ ಪರ್ವತ ಒಂದು ಕಡೆ, ಹಿಂದೂ ಮಹಾಸಾಗರ ಒಂದು ಕಡೆ, ಸಿಂದೂ ನದಿ ಒಂದು ಕಡೆ. ಸಿಂದ್ ಪ್ರಾಂತ್ಯ ನಮ್ಮ ಬದುಕು ಭಾವನೆ ಹೊಂದಿರುವ ಸಂದರ್ಭದಲ್ಲಿ ಯೂರೋಪಿಯನ್ಸ್, ಅಮೇರಿಕನ್ಸ್, ಬ್ರಿಟನ್ಸ್ ಈ ರೀತಿ ಇಂಗ್ಲಿಷ್ ತನವನ್ನಿಟ್ಟು ಕರೆಯುತ್ತಾ ಹೋದ್ರೂ. ನಮ್ಮಲ್ಲಿರುವ ಸನಾತನ ಧರ್ಮದ ಮೂಲ ಹಿಂದೂ ಮಹಾಸಾಗರ, ಹಿಮಾಲಯ ಪ್ರದೇಶದ, ಸಿಂದೂ ನದಿ ಈ ಭಾಗದ ಜನರು ಜನಿಸುವ ಸಂದರ್ಭದಲ್ಲಿ ಹಿಂದೂ ಅಂತಾ ಮಾಡಿದ್ರೂ ಹೊರತು ಅದು ಧರ್ಮ ಅಲ್ಲ ಅದು ನಾಗರಿಕತೆ ಎಂದು ಹಿಂದುತ್ವದ ಬಗ್ಗೆ ರಮೇಶ್ ಕತ್ತಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.