Karnataka Ratna: ಅಪ್ಪು ಮೇಲಿನ ಅಭಿಮಾನಕ್ಕೆ ಸುರಿಯುವ ಮಳೆಯಲ್ಲೇ ಸಮಾರಂಭ ವೀಕ್ಷಿಸಿದ ಅನುಶ್ರೀ
Anchor Anushree | Puneeth Rajkumar: ಎಷ್ಟೇ ಜೋರಾಗಿ ಮಳೆ ಬಂದರೂ ಅನುಶ್ರೀ ಅವರು ಅಲ್ಲಿಂದ ಕಾಲ್ಕೀಳಲಿಲ್ಲ. ಮಳೆಯಲ್ಲಿ ನೆನೆಯುತ್ತಲೇ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ವೀಕ್ಷಿಸಿದರು.
ನಟಿ, ನಿರೂಪಕಿ ಅನುಶ್ರೀ (Anchor Anushree) ಅವರಿಗೆ ಪುನೀತ್ ರಾಜ್ಕುಮಾರ್ (Puneeth Rajkumar) ಮೇಲೆ ಅಪಾರ ಅಭಿಮಾನ. ಅನೇಕ ಸಂದರ್ಭಗಳಲ್ಲಿ ಅವರು ಈ ಕುರಿತು ಹೇಳಿಕೊಂಡಿದ್ದುಂಟು. ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಅವರೇ ನಿರೂಪಣೆ ಮಾಡಿದ್ದರು. ಮಂಗಳವಾರ (ನ.1) ನಡೆದ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಅನುಶ್ರೀ ಹಾಜರಿ ಹಾಕಿದ್ದರು. ಆದರೆ ಸಾಮಾನ್ಯ ಅಭಿಮಾನಿಯಂತೆ ಅವರು ಕಾಣಿಸಿಕೊಂಡರು. ಎಷ್ಟೇ ಜೋರಾಗಿ ಮಳೆ ಬಂದರೂ ಅವರು ಅಲ್ಲಿಂದ ಕಾಲ್ಕೀಳಲಿಲ್ಲ. ಮಳೆಯಲ್ಲಿ ನೆನೆಯುತ್ತಲೇ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸುವ ಮೂಲಕ ಅಪ್ಪುಗೆ ಅವರು ಗೌರವ ಸಲ್ಲಿಸಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 02, 2022 08:46 AM
Latest Videos