ತುಮಕೂರು: ಪೊಲೀಸ್ ಹುದ್ದೆ ಅಕಾಂಕ್ಷಿಗೆ ಡಿವೈಎಸ್​ಪಿಯಿಂದ ಹಲ್ಲೆ

TV9 Web
| Updated By: ವಿವೇಕ ಬಿರಾದಾರ

Updated on: Nov 01, 2022 | 3:23 PM

ಗೃಹ ಸಚಿವರ ಎದುರು ತಮ್ಮ ಅಳಲು ತೊಡಿಕೊಳ್ಳಲು ಬಂದ ಪೊಲೀಸ್ ಹುದ್ದೆ ಅಕಾಂಕ್ಷಿಗೆ ಡಿವೈಎಸ್​ಪಿ ಹಲ್ಲೆ ಮಾಡಿರುವ ಘಟನೆ ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು‌ ಮೈದಾನದಲ್ಲಿ ನಡೆದಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಎದುರು ತಮ್ಮ ಅಳಲು ತೊಡಿಕೊಳ್ಳಲು ಬಂದ ಪೊಲೀಸ್ ಹುದ್ದೆ ಅಕಾಂಕ್ಷಿಗೆ ಡಿವೈಎಸ್​ಪಿ ಹಲ್ಲೆ ಮಾಡಿರುವ ಘಟನೆ ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು‌ ಮೈದಾನದಲ್ಲಿ ನಡೆದಿದೆ. ಪೊಲೀಸ್ ಹುದ್ದೆಗೆ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಇಂದು (ನ.1) ಉತ್ತರ ಕರ್ನಾಟಕ‌ ಭಾಗದ ಆಕಾಂಕ್ಷಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲು ಬಂದಿದ್ದರು. ಈ ವೇಳೆ ಡಿವೈಎಸ್​ಪಿ ಶ್ರೀನಿವಾಸ್ ಓರ್ವ ಆಕಾಂಕ್ಷಿಗೆ ಹಲ್ಲೆ ಮಾಡಿದ್ದಾರೆ. ಡಿವೈಎಸ್​ಪಿ ಶ್ರೀನಿವಾಸ್​ ಹಲ್ಲೆ ನಡೆಸಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.