ಟೊರೊಂಟೊದಲ್ಲಿ ಬಹುಭಾಷಾ ನಟಿ ರಂಭಾ ಓಡಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅವರ ಮಗಳಿಗೆ ಗಂಭೀರ ಗಾಯ
ರಂಭಾ ಮತ್ತು ಅವರೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳು ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದರೆ ಸಾಶಾ ಹೆಸರಿನ ಮಗಳಿಗೆ ಹೆಚ್ಚು ಗಾಯಗಳಾಗಿದ್ದು ಅವಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ
ಬೆಂಗಳೂರು: ಬಹುಭಾಷಾ ನಟಿ ರಂಭಾ (Rambha) ಈಗ ಕೆನಡಾದಲ್ಲಿ ಪತಿ ಹಾಗೂ ಮೂರು ಮಕ್ಕಳೊಂದಿಗೆ ವಾಸವಾಗಿರೋದು ಬಹಳಷ್ಟು ಜನಕ್ಕೆ ಗೊತ್ತಿದೆ. ನವೆಂಬರ್ ಒಂದರಂದು ಅವರು ಮಕ್ಕಳೊಂದಿಗೆ ತಾವೇ ಡ್ರೈವ್ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ (accident). ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆತರುವಾಗ ಆಕ್ಸಿಡೆಂಟ್ ಸಂಭವಿಸಿದೆ. ರಂಭಾ ಮತ್ತು ಅವರೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳು ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದರೆ ಸಾಶಾ (Sasha) ಹೆಸರಿನ ಮಗಳಿಗೆ ಹೆಚ್ಚು ಗಾಯಗಳಾಗಿದ್ದು ಅವಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕನ್ನಡದಲ್ಲಿ ಸರ್ವರ್ ಸೋಮಣ್ಣ, ಓ ಪ್ರೇಮವೇ, ಸಾಹುಕಾರ, ಪಾಂಡುರಂಗ ವಿಠ್ಠಲ, ಗಂಡುಗಲಿ ಕುಮಾರರಾಮ, ಭಾವ ಭಾಮೈದ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದರು.
Latest Videos